ಲಂಡನ್: ಇಂಗ್ಲೆಂಡ್ನಲ್ಲಿ ವಾಸಿಸುತ್ತಿರುವ ತಮಿಳು ಸಮುದಾಯದ ಹಾಗೂ ವಿಶ್ವದ ನಾನಾ ಭಾಗಗಳಲ್ಲಿ ಪೊಂಗಲ್ ಹಬ್ಬ ಆಚರಣೆ ಮಾಡುವವರಿಗೆ ಪ್ರಧಾನಿ ಬೋರಿಸ್ ಜಾನ್ಸನ್ ಶುಭಾಶಯ ಕೋರಿದ್ದಾರೆ.
ಬ್ರಿಟಿಷ್ ತಮಿಳು ಸಮುದಾಯ ಹಾಗೂ ವಿಶ್ವದ ಎಲ್ಲೆಡೆ ನೆಲೆಸಿರುವ ತಮಿಳು ಜನರಿಗೆ ಪೊಂಗಾಲ್ ಹಬ್ಬದ ಶುಭಾಶಯಗಳು. ನಿಮ್ಮ ಸ್ನೇಹಿತರು ಹಾಗು ಕುಟುಂಬದೊಂದಿಗೆ ಒಟ್ಟಾಗಿ ಹಬ್ಬ ಆಚರಿಸಲು ಎದುರು ನೋಡುತ್ತಿದ್ದೀರಿ ಎಂದು ಭಾವಿಸಿದ್ದೇನೆ. ರುಚಿಕರವಾದ ಅಕ್ಕಿ ಕಡುಬು, ಪೊಂಗಲ್ ಅನ್ನು ಶೀಘ್ರದಲ್ಲೇ ಆನಂದಿಸುವಿರಿ ಎಂದು ಹೇಳಿದ್ದಾರೆ.
ಬ್ರಿಟನ್ ಅಭಿವೃದ್ಧಿಗೆ, ಶಾಲೆಗಳಲ್ಲಿ ಭೋದನೆ ಮಾಡುವುದು ಹಾಗೂ ಆರೋಗ್ಯ ಕ್ಷೇತ್ರದಲ್ಲಿ ತಮಿಳು ಸಮುದಾಯ ನೀಡಿದ ಕೊಡುಗೆಯನ್ನು ಬೋರಿಸ್ ಸ್ಮರಣೆ ಮಾಡಿದ್ದಾರೆ. ಅಲ್ಲದೇ ಸಂತಸ, ಸಮೃದ್ಧಿ ಲಭಿಸಲಿ. ಉತ್ತಮ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಜೊತೆಯಾಗಿ ಮುಂದುವರೆಯೋಣ ಎಂದು ವಿಶ್ ಮಾಡಿದ್ದಾರೆ. ಸೂರ್ಯ ಇದೇ ದಿನ ತನ್ನ ಪಥ ಬದಲಾಯಿಸಲಿದ್ದು, ಭಾರತದಾದ್ಯಂತ ಮಕರ ಸಂಕ್ರಾಂತಿ, ಎಳ್ಳು ಅಮಾವಾಸ್ಯೆ, ಭೋಗಿ ಸೇರಿದಂತೆ ವಿವಿಧ ಹೆಸರುಗಳೊಂದಿಗೆ ಹಬ್ಬವನ್ನು ಆಚರಿಸಲಾಗುತ್ತದೆ.
I want to wish Tamils in the UK and around the world a happy Thai Pongal. pic.twitter.com/GCROsgqI9d
— Boris Johnson (@BorisJohnson) January 13, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post