ಪ್ರಶಾಂತ್ ನೀಲ್ ಹಾಗೂ ಡಾರ್ಲಿಂಗ್ ಪ್ರಭಾಸ್ ಕಾಂಬಿನೇಷನ್ನಲ್ಲಿ ಸುದ್ದಿ ಮಾಡ್ತಿರೋ ‘ಸಲಾರ್’ ಸಿನಿಮಾದ ಮುಹೂರ್ತ ಇಂದು ಹೈದರಾಬಾದ್ನಲ್ಲಿ ನೆರವೇರಿದೆ. ‘ಸಲಾರ್’ ಸಿನಿಮಾ ತಂಡ, ಕುಟುಂಬದವರು ಹಾಗೂ ಆಪ್ತರ ಸಮ್ಮುಖದಲ್ಲಿ ಮಹೂರ್ತ ನಡೆದಿದೆ. ಈ ಸಂಭ್ರಮದ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಟ್ವೀಟ್ ಮಾಡುವ ಮೂಲಕ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ‘ಅಭಿಮಾನಿಗಳು ತಮ್ಮ ಮೇಲಿಟ್ಟರುವ ನಿರೀಕ್ಷೆಯನ್ನ ಹುಸಿಗೊಳಿಸುವುದಿಲ್ಲ, ನನಗೆ ನೀವು ನೀಡ್ತಿರುವ ಪ್ರೀತಿ ಹಾಗೂ ಸಪೋರ್ಟ್ಗೆ ನಾನು ಚಿರರುಣಿ’ ಅಂತ ಬರೆದುಕೊಂಡಿದ್ದಾರೆ.
ತಮಗೆ ‘ಸಲಾರ್’ಗೆ ಅವಕಾಶ ನೀಡಿದ ಹೊಂಬಾಳೆ ಫಿಲ್ಮ್ಸ್ ಮಾಲೀಕರಾದ ವಿಜಯ್ ಕಿರಗಂದೂರ್ ಹಾಗೂ ನಟ ಡಾರ್ಲಿಂಗ್ ಪ್ರಭಾಸ್ಗೆ ಪ್ರಶಾಂತ್ ನೀಲ್ ಸ್ಪೆಷಲ್ ಥ್ಯಾಂಕ್ಯೂ ತಿಳಿಸಿದ್ದಾರೆ. ಇದಲ್ಲದೇ ಮುಹೂರ್ತಕ್ಕೆ ಆಗಮಿಸಿದ ತಮ್ಮ ‘ಕೆಜಿಎಫ್’ ನಾಯಕನಿಗೂ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.
ಓಪನ್ ಏರ್ನಲ್ಲಿ ಸಣ್ಣ ಗುಡಿಯ ಮುಂದೆ, ಸೆಟ್ ಹಾಕಿ ಈ ಮುಹೂರ್ತ ಸಮಾರಂಭವನ್ನ ಹಮ್ಮಿಕೊಳ್ಳಲಾಗಿತ್ತು. ತೂಕ ಇಳಿಸಿಕೊಂಡು ಬಿಳಿ ಕುರ್ತಾ ಹಾಕಿ ಮಿಂಚ್ತಿದ್ದ ಪ್ರಭಾಸ್ರನ್ನ ನೋಡಿ ಅಭಿಮಾನಿಗಳು ಆಗಲೇ ‘ಸಲಾರ್’ ಸಿನಿಮಾದ ಲುಕ್ ಲೆಕ್ಕಾಚಾರದಲ್ಲಿದ್ದಾರೆ.
ಇನ್ನು, ‘ಸಲಾರ್’ ಮುಹೂರ್ತಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ಸಚಿವರು ಹಾಗೂ ಉಪಮುಖ್ಯಮಂತ್ರಿಗಳೂ ಆಗಿರುವ ಡಾ. ಅಶ್ವತ್ಥನಾರಾಯಣ್ ಸಿ.ಎನ್ ಭಾಗಿಯಾಗಿದ್ದರು. ಇದಲ್ಲದೇ, ವಿಜಯ್ ಕಿರಗಂದೂರ್, ಕೆಆರ್ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ, ರಾಕಿಂಗ್ ಸ್ಟಾರ್ ಯಶ್, ಸಂಗೀತ ನಿರ್ದೇಶಕ ರವಿ ಬಸ್ರೂರು ಹಾಗೂ ಗಣ್ಯರ ಕುಟುಂಬದವರು ಈ ದೊಡ್ಡ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಈ ತಿಂಗಳಾಂತ್ಯಕ್ಕೆ ‘ಸಲಾರ್’ ಶೂಟಿಂಗ್ ಶುರುವಾಘಲಿದೆ ಅಂತ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
Thank you @VKiragandur sir and #Prabhas sir for this opportunity.
Thank you my rocky @TheNameIsYash for being with us today.
Will not let you all down!!
Overwhelmed with all the love and support coming our way.Thank you everyone🙏@hombalefilms#SalaarSaagaBegins #SalaarLaunch pic.twitter.com/34TNIiEMvk— Prashanth Neel (@prashanth_neel) January 15, 2021
Thanks to each and everyone from the film fraternity for gracing the event and blessing our team.#Prabhas @hombalefilms @prashanth_neel @VKiragandur#Salaar #SalaarSagaBegins
Click for more photos: https://t.co/NqxzzwvwPz pic.twitter.com/nsV3UxI4lu— Hombale Films (@hombalefilms) January 15, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post