ಬಹುನಿರೀಕ್ಷಿತ ‘ಕೆಜಿಎಫ್-2’ ಸಿನಿಮಾದ ಟೀಸರ್ ಸದ್ಯ ಟ್ರೆಂಡಿಂಗ್ನಲ್ಲಿದ್ದು ವರ್ಲ್ಡ್ವೈಡ್ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ, ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಡಿರುವ ಹೊಸ ಪೋಸ್ಟ್ ಪುಷ್ಠಿ ನೀಡ್ತಿದೆ. ಹೌದು.. ‘ಕೆಜಿಎಫ್-2’ ಸಿನಿಮಾದ ಟೀಸರ್ 150 ಮಿಲಿಯನ್ ವೀಕ್ಷಣೆಯನ್ನ ಪೂರೈಸಿ ಮುನ್ನುಗ್ಗುತ್ತಿರುವ ಬಗ್ಗೆ ಪ್ರಶಾಂತ್ ನೀಲ್ ಹಂಚಿಕೊಂಡು ಅಭಿಮಾನಿಗಳಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ.
ಜನವರಿ 8ರಂದು ರಾಕಿಂಗ್ ಸ್ಟಾರ್ ಯಶ್ ಬರ್ತ್ಡೇಗೆ ರಿಲೀಸ್ ಆಗಬೇಕಿದ್ದ ‘ಕೆಜಿಎಫ್-2’ ಟೀಸರ್, ಲೀಕ್ ಆದ ಕಾರಣದಿಂದಾಗಿ ಜನವರಿ 7ರ ರಾತ್ರಿ 9.29ಕ್ಕೇ ಬಿಡುಗಡೆಯಾಗಿತ್ತು. ಲೀಕ್ ಆದ ನಂತರ ಟೀಸರ್ ಇಷ್ಟು ವೀಕ್ಷಣೆ ಗಳಿಸಲಿದೆ ಅನ್ನೋದು ಯಾರೊಬ್ಬರೂ ಅಂದುಕೊಂಡಿರಲಿಲ್ಲ. ಇದೀಗ ಟೀಸರ್ಗೆ ಸಿಕ್ಕ ಗೆಲುವಿಗೆ, ಶ್ರಮಕ್ಕೆ ಸಿಕ್ಕ ಪ್ರತಿಫಲಕ್ಕೆ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ತಂಡ ಆಭಾರಿಯಾಗಿದೆ. ಮುಂದೇನಿದ್ರು ಸಿನಿಮಾ ರಿಲೀಸ್ ಆದ ಮೇಲೆ ಅಸಲಿ ಆಟ ಅನ್ನುವಂತಿದೆ.
ಇನ್ನು, ಸದ್ಯ ಪೋಸ್ಟ್ ಪ್ರೊಡಕ್ಷನ್ನಲ್ಲಿ ಬ್ಯುಸಿಯಿರುವ ‘ಕೆಜಿಎಫ್-2’ ಚಿತ್ರತಂಡ, ‘ಸಲಾರ್’ ಸಿನಿಮಾದ ಮುಹೂರ್ತ ಕಾರ್ಯಕ್ರಮವನ್ನೂ ಇಂದು ನೆರವೇರಿಸಲಿದೆ.
Overwhelmed…..Thank you🙏 pic.twitter.com/TbIiMpRfdp
— Prashanth Neel (@prashanth_neel) January 14, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post