ನವದೆಹಲಿ: PM CARES ನಿಧಿಯನ್ನ ಪಾರದರ್ಶಕಗೊಳಿಸುವಂತೆ ಒತ್ತಾಯಿಸಿ ಮಾಜಿ ನೂರಕ್ಕೂ ಹೆಚ್ಚು ಮಾಜಿ ಅಧಿಕಾರಿಗಳ ತಂಡ ಪ್ರಧಾನಿ ಮೋದಿಗೆ ಪತ್ರ ಬರೆದಿದೆ.
ಪತ್ರದಲ್ಲಿ, ನಾವು ಪಿಎಂ ಕೇರ್ಸ್ಗೆ ಸಂಬಂಧಿಸಿದಂತೆ ನಾಗರಿಕರ ಸಹಾಯ ಮತ್ತು ತುರ್ತು ಸಂದರ್ಭಗಳಲ್ಲಿ ಬಂದ ಪರಿಹಾರವನ್ನು ಗಮನಿಸುತ್ತಲೇ ಇದ್ದೇವೆ ಮತ್ತು ಚರ್ಚೆಗಳನ್ನು ಗಮನಿಸುತ್ತಿದ್ದೇವೆ. ಪಿ ಎಂ ಕೇರ್ಸ್ನ್ನು ಹುಟ್ಟುಹಾಕಿದ ಕಾರಣ ಮತ್ತು ಅದನ್ನು ಈಗ ಬಳಸಿಕೊಳ್ಳುತ್ತಿರುವುದನ್ನು ಗಮನಿಸಿದಾಗ ನಮಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಪ್ರಧಾನ ಮಂತ್ರಿ ಸ್ಥಾನದಲ್ಲಿರುವವರು ಆ ಹುದ್ದೆಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನೂ ಪಾರದರ್ಶಕವಾಗಿಡುವುದು ಅವಶ್ಯ ಎಂದಿದ್ದಾರೆ.
ಈ ಪತ್ರಕ್ಕೆ ಮಾಜಿ ಐಎಎಸ್ ಅಧಿಕಾರಿಗಳಾದ ಅನಿತಾ ಅಗ್ನಿಹೋತ್ರಿ, ಎಸ್.ಪಿ. ಅಂಬ್ರೋಸ್, ಶರದ್ ಬೆಹಾರ್, ಸಜ್ಜದ್ ಹಸ್ಸನ್, ಹರ್ಷ್ ಮಂದೆರ್, ಪಿ. ಜಾಯ್ ಒಮ್ಮೆನ್, ಅರುಣ್ ರಾಯ್ ಮತ್ತು ಮಾಜಿ ರಾಜತಾಂತ್ರಿಕರಾದ ಮಧು ಭದೌರಿ,ಕೆ.ಪಿ. ಫಾಬಿಯನ್, ದೇಬ್ ಮುಖರ್ಜಿ ಮ ಸುಜಾತಾ ಸಿಂಗ್ ಹಾಗೂ ಮಾಜಿ ಐಪಿಎಸ್ ಅಧಿಕಾರಿಗಳಾದ ಎ.ಎಸ್. ದುಲಾತ್, ಪಿ.ಜಿ. ಜೆ. ನಂಪೂತಿರಿ ಹಾಗೂ ಜೂಲಿಯೊ ರಿಬೈರೋ ಸಹಿ ಹಾಕಿದ್ದಾರೆ.
2020 ರ ಮಾರ್ಚ್ ತಿಂಗಳಿನಲ್ಲಿ ಪ್ರಧಾನ ಮಂತ್ರಿಗಳ ಕಚೇರಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ನೆರವು ನೀಡುವಂತೆ ಕೋರಿ PM CARES ಹೆಸರಿನಲ್ಲಿ ಖಾತೆಯೊಂದನ್ನ ತೆರೆದಿತ್ತು. ನೂರಾರು ಉದ್ಯಮಿಗಳು ಕೋಟ್ಯಂತರ ರೂ ಹಣವನ್ನ ಪಿ ಎಂ ಕೇರ್ಸ್ಗೆ ನೆರವು ನೀಡಿದ್ದರು ಎನ್ನಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post