ಹೈದ್ರಾಬಾದ್: ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ರಾಮತೀರ್ಥದಲ್ಲಿ ಸುಮಾರು 400 ವರ್ಷಕ್ಕಿಂತ ಹಳೆಯದಾದ ಶ್ರೀರಾಮ ದೇವರ ವಿಗ್ರಹವನ್ನ ಧ್ವಂಸ ಮಾಡಿರೋದಕ್ಕೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ರಾಮತೀರ್ಥ ಪ್ರದೇಶ ಬೆಟ್ಟದ ಮೇಲಿದ್ದ ಕೋದಂಡ ರಾಮ ದೇವಾಲಯದಲ್ಲಿದ್ದದ ರಾಮನ ವಿಗ್ರಹ ಶಿರಚ್ಛೇದ ಮಾಡಿ ಸಮೀಪದ ಕೊಳದಲ್ಲಿ ಎಸೆಯಲಾಗಿತ್ತು. ಈ ಪ್ರಕರಣಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಆಂಧ್ರಪ್ರದೇಶದಲ್ಲಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.
ಇದನ್ನೂ ಓದಿ: 400 ವರ್ಷ ಹಿಂದಿನ ಶ್ರೀರಾಮ ವಿಗ್ರಹ ಧ್ವಂಸ- ಭಾರೀ ಪ್ರತಿಭಟನೆ
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಇಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ದೇವರ ಮೂರ್ತಿಯನ್ನ ವಿರೂಪಗೊಳಿಸಿದ್ದನ್ನ ಮತ್ತು ಆಂಧ್ರ ಪ್ರದೇಶದಲ್ಲಿ ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿಯನ್ನ ಖಂಡಿಸಿದರು. ಜೊತೆಗೆ ಪ್ರಕರಣದ ತನಿಖೆಯ ವಿವರಗಳನ್ನ ಹಾಗೂ ದೇವಾಲಯಕ್ಕೆ ನೀಡಿರುವ ಭದ್ರತೆಗಳ ಬಗ್ಗೆ ಅಲ್ಲಿನ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿಯನ್ನ ಪಡೆದುಕೊಂಡರು.
ಇದನ್ನೂ ಓದಿ: ಆಂಧ್ರದಲ್ಲಿ ಮುಂದುವರೆದ ದೇವಸ್ಥಾನಗಳ ಮೇಲಿನ ದಾಳಿ; 2020 ರಲ್ಲಿ 228.. 2021ರಲ್ಲಿ 3 ಪ್ರಕರಣ
ನಂತರ ಸುದ್ದಿಗೋಷ್ಠಿ ನಡೆಸಿ ದೇವರ ಮೂರ್ತಿ ಭಗ್ನಗೊಳಿಸಿದ ಕೃತ್ಯವನ್ನ ಖಂಡಿಸಿದರು. ಅಲ್ಲದೇ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಆಂಧ್ರ ಸರ್ಕಾರಕ್ಕೆ ಪತ್ರ ಬರೆದು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಆಂಧ್ರಪ್ರದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಇದೊಂದು ಸೂಕ್ಷ್ಮ ವಿಚಾರವಾಗಿರೋದ್ರಿಂದ ಹಿಂದೂಗಳ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ಆಂಧ್ರಪ್ರದೇಶದ ಸರ್ಕಾರ ಇದುವರೆಗೂ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮವನ್ನ ತೆಗೆದುಕೊಂಡಿಲ್ಲ. ಹೀಗಾಗಿ ತಾವು ಮಧ್ಯಪ್ರವೇಶ ಮಾಡಬೇಕು. ಅದರಲ್ಲೂ ರಾಮತೀರ್ಥದಲ್ಲಿ ನಡೆದ ಘಟನೆಯ ಬಗ್ಗೆ ಮಧ್ಯಪ್ರವೇಶ ಮಾಡಬೇಕು ಅಂತಾ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಆಂಧ್ರದಲ್ಲಿ ದೇಗುಲಗಳ ಧ್ವಂಸ: ರಾಮತೀರ್ಥ ಚಲೋ ಕೈಗೊಂಡಿದ್ದ ಬಿಜೆಪಿ ನಾಯಕರ ಬಂಧನ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post