ದಾವಣಗೆರೆ: ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಕೆಲವು ಶಾಸಕರು ನನ್ನ ಜೊತೆ ನೋವು ತೋಡಿಕೊಂಡಿದ್ದಾರೆ. ಹೀಗಾಗಿ ನಾಳೆ ಬೆಂಗಳೂರಲ್ಲಿ ಸಭೆ ನಡೆಸಲಿದ್ದೇವೆ ಎಂದು ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ಬಂಡಾಯ, ರೆಬೆಲ್, ಅಸಮಾಧಾನಿತರು ನಾವಲ್ಲ
ಜಿಲ್ಲೆಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು.. ನಾವೆಲ್ಲಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಕೆಲ ಶಾಸಕರು ದೂರವಾಣಿ ಮುಖಾಂತರ ನೋವು ತೊಡಿಕೊಂಡಿದ್ದಾರೆ. ಅಂತವರ ಜೊತೆ ನಾಳೆ ಬೆಂಗಳೂರಲ್ಲಿ ಸಭೆ ನಡೆಸಲಿದ್ದೇವೆ. ಬಳಿಕ ದೆಹಲಿ ಹೋಗಿ ವರಿಷ್ಠರೊಂದಿಗೆ ಚರ್ಚಿಸುವ ತೀರ್ಮಾನ ಮಾಡ್ತೇವೆ. ಕದ್ದುಮುಚ್ಚಿ ದೆಹಲಿಗೆ ಹೋಗಲ್ಲ. ನೋವು ಹೇಳಲು ಇದು ಅವಕಾಶ. ಯಾರ ವಿರುದ್ಧವೂ ದೂರು ಕೊಡೋಕೆ ಹೋಗಲ್ಲ, ಗುಂಪುಗಾರಿಕೆ ಮಾಡಲ್ಲ. ವಾಕ್ ಸ್ವಾತಂತ್ರ್ಯ ಇದೆ, ನೋವು ಹೇಳಿಕೊಳ್ಳುತ್ತೇವೆ ಎಂದರು.
ಸಿಎಂ ರಾಜಕೀಯವಾಗಿ ನಮ್ಮನ್ನ ಬೆಳೆಸಿದ್ದಾರೆ
ಸಿಎಂ ರಾಜಕೀಯವಾಗಿ ನಮ್ಮನ್ನ ಬೆಳೆಸಿದ್ದಾರೆ. ರಾಜಕೀಯವಾಗಿ ಅವಕಾಶ ಕೊಟ್ಟು ಬೆಳೆಸಿದ್ದಾರೆ. ಅವರ ವಿರುದ್ಧ ನಾವು ಕೆಲಸ ಮಾಡಲ್ಲ. ಬಂಡಾಯ, ರೆಬೆಲ್, ಅಸಮಾಧಾನಿತರು ನಾವಲ್ಲ. ನೋವು ಭಾವನೆಗಳನ್ನು ತಿಳಿಸುವ ಪ್ರಯತ್ನ ಮಾಡ್ತೇವೆ. ನಾಲ್ಕು ಗೋಡೆಗಳ ನಡುವೆ ಕೆಲ ಶಾಸಕರ ಜೊತೆ ಚರ್ಚೆ ನಡೆಸುತ್ತೇವೆ ಎಂದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post