ಬೆಂಗಳೂರು: ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ನಂತರವೂ ಸಚಿವಾಕಾಂಕ್ಷಿಗಳ ಅಸಮಾಧಾನ ಮುಂದುವರೆದಿದೆ. ಈ ಬಾರಿ ದೇವದುರ್ಗ ಶಾಸಕ ಶಿವನಗೌಡ ನಾಯಕ್ ಅಸಮಾಧಾನ ಹೊರಹಾಕಿದ್ದು ಈಗಿರುವ 32 ಸಚಿವರನ್ನೂ ಕೈಬಿಡಿ, ಹೊಸದಾಗಿ ಸಂಪುಟ ರಚನೆ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
20 ತಿಂಗಳು ಸಚಿವರಾದವರನ್ನ ಕೈ ಬಿಡಿ..ಇಡೀ ಸಂಪುಟವನ್ನೇ ಪುನಾರಚಿಸಿ. ಕೈಬಿಡುವವರಿಗೆ ಪಕ್ಷ ಸಂಘಟನೆ ಜವಾಬ್ದಾರಿ ಕೊಡಿ.. 32 ಹೊಸಬರಿಗೆ ಸಂಪುಟದಲ್ಲಿ ಅವಕಾಶ ಕೊಡಿ. ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ಕೊಡಬೇಕು. ಎಲ್ಲಾ ಜಿಲ್ಲೆ, ಸಾಮಾಜಿಕ ಪ್ರಾತಿನಿಧ್ಯದಂತೆ ಸಚಿವರನ್ನ ಮಾಡಿ. ಇದು ನಮ್ಮ ಮೂಲೆ ಮೂಲೆಯ ಶಾಸಕರ ಅಭಿಪ್ರಾಯ. ಕೆಳಹಂತದ ನಾಯಕರಿಗೆ ಅವಕಾಶ ಕೊಡಬೇಕು ಎಂದು ಹೇಳಿಕೆ ನೀಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post