ಬೆಂಗಳೂರು: ನಗರದ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಇಂದು ಸಿಐಎಸ್ಎಫ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಏರ್ಪೋರ್ಟ್ನ ಬಾತ್ರೂಮ್ನಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ.
ಚೆನ್ನೈನಲ್ಲಿರೋ ಕಸ್ಟಮ್ಸ್ ಅಧಿಕಾರಿ ಲಕ್ನೋಗೆ ತೆರಳಲು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ತಪಾಸಣೆ ನಡೆಸಲಾಗಿದ್ದು ಅಧಿಕಾರಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಧಿಕಾರಿಯ ಪತ್ನಿ 10 ಹಣ ತುಂಬಿದ್ದ ಬ್ಯಾಗ್ನ್ನು ಬಾತ್ರೂಮ್ನಲ್ಲಿ ಬಿಸಾಡಿದ್ದರು ಎನ್ನಲಾಗಿದೆ.
ಇರ್ಫಾನ್ ಅಹಮದ್ ಮಹಮ್ಮದ್ ಸಿಕ್ಕಿಬಿದ್ದ ಅಧಿಕಾರಿಯಾಗಿದ್ದು ಒಟ್ಟು 74, 81,500 ರೂಪಾಯಿಗಳಷ್ಟು ಹಣ, ಎರಡು ದುಬಾರಿ ಮೊಬೈಲ್ಗಳು, ಆ್ಯಪಲ್ ವಾಚ್ ಹಾಗೂ ಒಂದು ಸೂಟ್ಕೇಸ್ನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹಣ ಜಪ್ತಿ ಮಾಡಿದ ಸಿಐಎಸ್ಎಫ್ ಪೊಲೀಸರು ಪ್ರಕರಣವನ್ನ ಐಟಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post