ನವದೆಹಲಿ: ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಉತ್ಪಾದಿಸಿರುವ ಕೊವ್ಯಾಕ್ಸಿನ್ ಲಸಿಕೆಯ 45 ಲಕ್ಷ ಡೋಸ್ಗಳ ಖರೀದಿಗೆ ಭಾರತ ಮುಂದಾಗಿದ್ದು, ಈ ಕುರಿತು ಸಂಸ್ಥೆಗೆ ಕೇಂದ್ರ ಪತ್ರ ಬರೆದಿದೆ.
45 ಲಕ್ಷ ಡೋಸ್ಗಳಲ್ಲಿ 8 ಲಕ್ಷ ಡೋಸ್ಗಳನ್ನು ಭಾರತ್ ಬಯೋಟೆಕ್ ಭಾರತದ ಆಪ್ತ ದೇಶಗಳಾಗಿರುವ ಮಯನ್ಮಾರ್, ಮಾರಿಷಸ್, ಫಿಲಿಪೈನ್ಸ್ ಸೇರಿದಂತೆ ವಿವಿಧ ದೇಶಗಳಿಗೆ ಉಚಿತವಾಗಿ ರಫ್ತು ಮಾಡಲಿದೆ.
ಈಗಾಗಲೇ ಭಾರತ 55 ಲಕ್ಷ ಕೋವ್ಯಾಕ್ಸಿನ್ ಡೋಸ್ಗಳಿಗೆ ಅರ್ಡರ್ ಮಾಡಿದ್ದು, ಇದರ ಮೊದಲ ಹಂತದ 16.5 ಲಕ್ಷ ಲಸಿಕೆಗಳನ್ನು ಲಸಿಕೆಗಳನ್ನು ಬೆಂಗಳೂರು, ಪುಣೆ, ಡೆಲ್ಲಿ, ಭುವನೇಶ್ವರ, ಚೆನ್ನೈ, ಲಕ್ನೋ, ಜೈಪುರ ಸೇರಿದಂತೆ ವಿವಿಧ ನಗರಗಳಿಗೆ ಪೂರೈಕೆ ಮಾಡಿದೆ. ಸರ್ಕಾರ ಆದೇಶದ ಅನ್ವಯ ಬಯೋಟೆಕ್ ಲಸಿಕೆಗಳನ್ನು ಪೂರೈಕೆ ಮಾಡಿದ್ದು, 295 ರೂ. ಪ್ರತಿ ಡೋಸ್ ಬೆಲೆಯನ್ನು ಹೊಂದಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post