ಬೆಳಗಾವಿ: ಕೊರೊನಾ ಕಾರಣದಿಂದಾಗಿ ಸವದತ್ತಿ ಪುಣ್ಯಕ್ಷೇತ್ರ ಯಲ್ಲಮ್ಮನ ದೇವಾಲಯಕ್ಕೆ ಬೀಗ ಹಾಕಲಾಗಿದೆ. ದಿನಾಂಕ 31 ರ ವರೆಗೂ ಭಕ್ತರ ದರ್ಶನಕ್ಕೆ ಅವಕಾಶ ನೀಡದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಇದೇ 28 ರಂದು ಬನದ ಹುಣ್ಣಿಮೆ ಪ್ರಯುಕ್ತ ಯಲ್ಲಮ್ಮನ ದೇವಾಲಯದಲ್ಲಿ ಬೃಹತ್ ಜಾತ್ರೆಯೊಂದು ನಡೆಯಬೇಕಿತ್ತು. ಆದರೆ ಈ ಕೊರೊನಾ ಕಾಲದಲ್ಲಿ ಭಕ್ತರ ಸುರಕ್ಷತೆ ಹಿತದೃಷ್ಠಿಯಿಂದ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ್ ಜಾತ್ರೆಯನ್ನ ರದ್ದು ಮಾಡಿದ್ದಾರೆ. ಮನೆಯಲ್ಲೇ ಬನದ ಹುಣ್ಣಿಮೆ ಆಚರಣೆ ಮಾಡುವಂತೆ ಶ್ರೀ ರೇಣುಕಾ ಯಲ್ಲಮ್ಮಾ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಲ್ಲಿ ಮನವಿಮಾಡಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post