ನವದೆಹಲಿ: ದೇಶದಾದ್ಯಂತ ವಿಶ್ವದ ಅತೀದೊಡ್ಡ ವ್ಯಾಕ್ಸಿನೇಷನ್ಗೆ ಚಾಲನೆ ನೀಡಲಾಗಿದೆ. ನಾಲ್ಕನೇ ದಿನವಾದ ಇಂದೂ ಸಹ ದೇಶದಲ್ಲಿ ವ್ಯಾಕ್ಸಿನೇಷನ್ ನಡೆದಿದ್ದು, ಈವರೆಗೆ ಒಟ್ಟು 6,31,417 ಜನರಿಗೆ ಕೊರೊನಾ ವ್ಯಾಕ್ಸಿನ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಒಟ್ಟು 11,660 ಕೇಂದ್ರಗಳಲ್ಲಿ ಈವರೆಗೆ ವ್ಯಾಕ್ಸಿನ್ ನೀಡಲಾಗಿದೆ. ಇಂದು ಸಂಜೆ 6 ಗಂಟೆಯವರೆಗೆ ಒಟ್ಟು 3,800 ಕೇಂದ್ರಗಳಲ್ಲಿ ವ್ಯಾಕ್ಸಿನ್ ನೀಡಲಾಗಿದೆ. ಕರ್ನಾಟಕದಲ್ಲಿ ಇಂದು ಒಂದೇ ದಿನ 80,686 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ.
ಇನ್ನು ಬಿಬಿಎಂಪಿಯ ವಲಯಗಳಲ್ಲಿ ಇಂದು 3,978 ಮಂದಿಗೆ ವ್ಯಾಕ್ಸಿನ್ ನೀಡಲಾಗಿದೆ. 10,343 ಮಂದಿಗೆ ಲಸಿಕೆ ನೀಡುವ ಟಾರ್ಗೆಟ್ ಹೊಂದಲಾಗಿತ್ತು, ಈ ಪೈಕಿ 3,978 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಬಿಬಿಎಂಪಿ ಹೇಳಿದೆ.
ರಾಜ್ಯವಾರು ವ್ಯಾಕ್ಸಿನ್ ನೀಡಿರುವ ಅಂಕಿಅಂಶ..
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post