ಮೆಗಾಸ್ಟಾರ್ ಚಿರಂಜೀವಿ ತೆಲುಗು ಮಾತ್ರವಲ್ಲದೆ ಅನ್ಯ ರಾಜ್ಯಗಳಲ್ಲಿಯೂ ಪ್ರೇಕ್ಷಕರನ್ನ ಸಂಪಾದಿಸಿರೋ ಸ್ಟಾರ್ ನಟ. ರಾಜಕೀಯಕ್ಕೆ ಕೈ ಮುಗಿದು, ಮತ್ತೆ ತನ್ನನ್ನು ಬೆಳೆಸಿದ ಸಿನಿರಂಗಕ್ಕೆ ತಲೆಬಾಗಿ ಬ್ಯಾಕ್ಟೂ ಬ್ಯಾಕ್ ಸಿನಿಮಾಗಳನ್ನ ಮಾಡ್ತಿದ್ದಾರೆ. ಮೆಗಾ ಯೂನಿವರ್ಸೆಲ್ ಫ್ಯಾನ್ಸ್ಗಳಿಗೆ ಬ್ಯಾಕ್ ಟು ಬ್ಯಾಕ್ ಮನರಂಜನೆಯ ಹಬ್ಬದೂಟ ಬಡೆಸುತ್ತಿದ್ದಾರೆ. ‘ಖೈದಿ ನಂಬರ್ 150’ ಮತ್ತು ‘ಸೈರಾ ನರಸಿಂಹ ರೆಡ್ಡಿ’ಯಾಗಿ ರಂಜಿಸಿದ್ದ ಚಿರು ಈಗ ‘ಆಚಾರ್ಯ’ ಆಗಿದ್ದಾರೆ.
ನಟ ಚಿರಂಜೀವಿ ನಟಿಸುತ್ತಿರುವ ‘ಆಚಾರ್ಯ’ ಸಿನಿಮಾ ಹಲವು ಕಾರಣಕ್ಕೆ ಗಮನ ಸೆಳೆಯುತ್ತಿದೆ. ಸಿನಿಮಾದ ಪೋಸ್ಟರ್‌ಗಳು ಸಿನಿಮಾ ಬಗ್ಗೆ ಕುತೂಹಲವನ್ನು ಹೆಚ್ಚಿಸಿದ್ರೆ ಮೊನ್ನೆ ಸೆಟ್ನ ವಿಚಾರಕ್ಕೂ ಸಿನಿಮಾ ಭಾರೀ ಸೌಂಡ್ ಮಾಡಿತ್ತು. ಬರೋಬ್ಬರಿ 20 ಎಕ್ಕರೆಯಲ್ಲಿ ಆಚಾರ್ಯ ಸಿನಿಮಾದ ಸೆಟ್ಟನ್ನ ಹಾಕಿಸಲಾಗಿದೆ. ಈಗ ಇದೇ ‘ಆಚಾರ್ಯ’ನ ಬಳಗದಿಂದ ಡಬಲ್ ಸಮಾಚಾರ ಹೊರಬಂದಿದೆ.
ಕೊರಟಾಲ ಶಿವ ಕಲ್ಪನೆಯಲ್ಲಿ ಮೂಡಿ ಬರುತ್ತಿರುವ ‘ಆಚಾರ್ಯ’ ಸಿನಿಮಾದಲ್ಲಿ ಸಿದ್ಧ ಅನ್ನೋ ವಿಶೇಷ ಪಾತ್ರವನ್ನ ರಾಮ್ ಚರಣ್ ತೇಜಾ ನಿರ್ವಹಿಸುತ್ತಿದ್ದಾರೆ. ಈಗಾಗಲೇ ರಾಜಾಮೌಳಿಯವರ ಥ್ರಿಬಲ್ ಆರ್ ಸಿನಿಮಾದಲ್ಲಿ ನಟಿಸುತ್ತಿರೋ ರಾಮ್ ಚರಣ್ , ತನ್ನ ತಂದೆಯೊಟ್ಟಿಗೆ ಸ್ಕ್ರೀನ್ನಲ್ಲಿ ಮೂರನೇ ಬಾರಿಗೆ ಕಾಣಿಸಿಕೊಳ್ತಿರೋದು ವಿಶೇಷ.
ಈ ಮೊದಲು ಮಗನ ಸಿನಿಮಾದಲ್ಲಿ ತಂದೆ ಕಾಣಿಸಿಕೊಂಡಿದ್ರು, ಆದ್ರೆ ಫಸ್ಟ್ ಟೈಮ್ ತಂದೆಯ ಸಿನಿಮಾದಲ್ಲಿ ಮಗ ಅತಿಥಿಯಾಗಿ ವಿಶೇಷ ಪಾತ್ರ ಮಾಡ್ತಿದ್ದಾರೆ. ಇನ್ನು ‘ಆಚಾರ್ಯ’ ಸಿನಿಮಾದ ಎರಡನೇ ಸ್ಪೆಷಲ್ ಸಮಾಚಾರದ ಬಗ್ಗೆ ಹೇಳೋದಾದರೆ ರಾಮ್ ಚರಣ್ ನಿರ್ಮಾಣದ ‘ಆಚಾರ್ಯ’ ಸಿನಿಮಾವನ್ನ ನಾನ್ ಸ್ಟಾಪ್ ಶೂಟಿಂಗ್ ಮಾಡಿ, ಒಂದೇ ಶೆಡ್ಯೂಲ್ನಲ್ಲಿ ಮುಗಿಸಬೇಕು ಅನ್ನೋದು ಚಿತ್ರತಂಡ ಗುರಿಯಾಗಿದೆ. ನಾನ್ ಸ್ಟಾಪ್ ಶೂಟಿಂಗ್ ಮಾಡಿ ಮುಗಿಸಲು ಕಾರಣ ’ಏಪ್ರಿಲ್’ ನಲ್ಲೇ ಸಿನಿಮಾವನ್ನ ಬಹುಭಾಷೆಗಳಲ್ಲಿ ರಿಲೀಸ್ ಮಾಡಬೇಕೆಂದಿರುವ ಚಿತ್ರತಂಡದ ಗುರಿ. ಶೂಟಿಂಗ್ಗೆ ಬ್ರೇಕ್ನೀಡದೆ ಚಿತ್ರೀಕರಣ ಪೂರ್ತಿ ಮಾಡಿ ಸೂಕ್ತ ಸಮಯದಲ್ಲಿ ಪ್ರೇಕ್ಷಕರ ಮುಂದೆ ಬರಬೇಕು ಅನ್ನೋದು ಚಿರಂಜೀವಿಯವರ ಆಸೆಯಂತೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post