ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಹುನಿರೀಕ್ಷಿತ ‘ಫ್ಯಾಂಟಮ್’ ಸಿನಿಮಾ ಆಗೊಮ್ಮೆ ಈಗೊಮ್ಮೆ ಏನಾದರೊಂದು ವಿಚಾರಕ್ಕೆ ಸುದ್ದಿಯಾಗ್ತಲೇ ಇದೆ. ಇಂದು ಸಂಜೆ 4 ಗಂಟೆಗೆ ‘ಫ್ಯಾಂಟಮ್’ ಚಿತ್ರತಂಡದ ಕಡೆಯಿಂದ ಹೊಸ ಅಪ್ಡೇಟ್ ಕೂಡ ಹೊರ ಬೀಳಲಿದೆ. ಅಷ್ಟರಲ್ಲೇ ನ್ಯೂಸ್ ಫಸ್ಟ್ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ‘ಫ್ಯಾಂಟಮ್’ ತಂಡ ಟೈಟಲ್ ಬದಲಾವಣೆ ಮಾಡಲು ನಿರ್ಧರಿಸಿದ್ದಾರೆ ಅನ್ನೋದು ತಿಳಿದು ಬಂದಿದೆ. ಜೊತೆಗೆ ‘ಫ್ಯಾಂಟಮ್’ ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ನಟಿಸ್ತಿರೋದ್ರ ಬಗ್ಗೆಯೂ ಸುದ್ದಿ ಹರಿದಾಡ್ತಿದೆ.
ಹೌದು.. ಬಿಗ್ ಬಿ ಅಮಿತಾಬ್ ಬಚ್ಚನ್ ‘ಫ್ಯಾಂಟಮ್’ ಸಿನಿಮಾದಲ್ಲಿ ಕಿಚ್ಚನ ಜೊತೆ ನಟಿಸಲಿದ್ದಾರೆ. ಜೊತೆಗೆ ‘ಫ್ಯಾಂಟಮ್’ ಶೀರ್ಷಿಕೆಯ ಬದಲು ‘ವಿಕ್ರಾಂತ್ ರೋಣ’ ಅಂತ ಟೈಟಲ್ ಬದಲಿಸಲಾಗ್ತಿದೆ ಅನ್ನೋದು ಕೇಳಿ ಬರ್ತಿದೆ. ವಿಕ್ರಾಂತ್ ರೋಣ, ‘ಫ್ಯಾಂಟಮ್’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಪಾತ್ರದ ಹೆಸರು. ಸದ್ಯ 4 ಗಂಟೆಗೆ ಈ ಬಗ್ಗೆ ‘ಫ್ಯಾಂಟಮ್’ ಚಿತ್ರತಂಡ ಏನು ಅಪ್ಡೇಟ್ ಕೊಡಲಿದೆ ಅನ್ನೋದನ್ನ ಕಾದು ನೋಡಬೇಕು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post