ಬೆಂಗಳೂರು: 140 ದಿನಗಳು ಜೈಲಿನಲ್ಲೇ ಕಳೆದಿದ್ದ ನಟಿ ರಾಗಿಣಿಗೆ ಇಂದು ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆದರೂ ಇಂದೇ ರಾಗಿಣಿ ಬಿಡುಗಡೆ ಮಾಡೋದು ಕಷ್ಟಸಾಧ್ಯ ಎನ್ನಲಾಗಿದೆ.
ಸೆಪ್ಟಂಬರ್ 4 ರಂದು ಡ್ರಗ್ಸ್ ಕೇಸಿನ ಸಂಬಂಧವಾಗಿ ನಟಿ ರಾಗಿಣಿ ದ್ವಿವೇದಿಯವರನ್ನು ಬಂಧಿಸಲಾಗಿತ್ತು. ಅದೇ ಸೆಫ್ಟೆಂಬರ್ 14ರಂದು ನ್ಯಾಯಾಲಯ ಬಂಧನಕ್ಕೆ ರಾಗಿಣಿಯವರನ್ನು ಕಳಿಸಲಾಗಿತ್ತು. ಹೀಗೆ ಜೈಲು ಸೇರಿದ ರಾಗಿಣಿಯವರ ಬಿಡುಗಡೆ ಕೋರಿ ಅನೇಕ ಬಾರಿ ಜಾಮೀನು ಅರ್ಜಿ ಸಲ್ಲಿಸಿದರಾದರೂ ಜಾಮೀನು ಸಿಕ್ಕಿರಲಿಲ್ಲ. ರಾಜ್ಯ ಹೈ ಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು, ಇದನ್ನು ಪ್ರಶ್ನಿಸಿ ನಟಿ ರಾಗಿಣಿ ಪರ ವಕೀಲರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಇಂದು ಅವರಿಗೆ ಜಾಮೀನು ಮಂಜೂರಾಗಿದೆ ಆದರೆ ಅವರು ಇಂದೇ ಬಿಡುಗಡೆಯಾಗಬೇಕಾದರೆ ಸುಪ್ರೀಂ ಕೋರ್ಟ್ನಿಂದ ಜಾಮೀನು ಪ್ರತಿಯನ್ನು ತರಬೇಕಿದೆ. ಸರ್ಟಿಫೈಡ್ ಪ್ರತಿ ತಂದರಷ್ಟೇ ಬಿಡುಗಡೆಮಾಡಲಾಗುತ್ತದೆ ಎನ್ನಲಾಗುತ್ತಿದ್ದು, ಇಂದೇ ದೆಹಲಿಯಿಂದ ಪ್ರತಿತಂದು ಬಿಡುಗಡೆ ಗೊಳಿಸುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ.
ಇದಕ್ಕೆ ಮತ್ತೊಂದು ದಾರಿಯೂ ಇದೆ ಫ್ಯಾಕ್ಸ್ ಮೂಲಕ ಪ್ರತಿ ತರಿಸಿಕೊಂಡು ಅಟೆಸ್ಟಡ್ ಮಾಡಿಸಿ ಸಲ್ಲಿಸಬಹುದು. ಆದರೆ ಅದರಲ್ಲಿ ಯಾವುದೇ ದೋಷ ಕಂಡು ಬಂದರೆ ಬಿಡುಗಡೆ ಕಷ್ಟ ಸಾಧ್ಯಎನ್ನಲಾಗಿದೆ. ಅಲ್ಲದೆ ಸುಪ್ರೀಂ ಕೋರ್ಟ್ನಲ್ಲಿ ತಕ್ಷಣಕ್ಕೆ ಜಾಮೀನು ಪ್ರತಿ ಸಿಗಲ್ಲ, ಹೀಗಾಗಿ ಸರ್ಟಿಫೈಡ್ ಕಾಫಿ ತರುವ ಸಾಧ್ಯತೆಯೇ ಹೆಚ್ಚಾಗಿದೆ. ಸರ್ಟಿಫೈಡ್ ಪ್ರತಿ ತಂದ ನಂತರ ಕೆಳ ಹಂತದ ನ್ಯಾಯಾಲಯದಲ್ಲಿ ಜಾಮೀನು ಷರತ್ತುಗಳನ್ನ ಪೂರೈಸಿ ನಂತರವೇ ಅವರನ್ನ ಬಿಡುಗಡೆ ಮಾಡಲಾಗುತ್ತದೆ. ಆದ್ದರಿಂದ ಇಂದು ರಾಗಿಣಿಯವರ ಬಿಡುಗಡೆ ಕಷ್ಟ ಸಾಧ್ಯ ಎನ್ನಲಾಗಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟಿನಿಂದ ನಟಿ ರಾಗಿಣಿಗೆ ಜಾಮೀನು ಮಂಜೂರು
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post