ಬಾಗಲಕೋಟೆ: ಎರಡು ಬೈಕ್ಗಳಿಗೆ ಕಾರು ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಅಲಗೂರು ಗ್ರಾಮದ ಬಳಿ ನಡೆದಿದೆ. ಹನುಮಂತ ಕಾಂಬಳೆ(38), ಅಮೋಘಿ ಡವಳೇಶ್ವರ (26),ಮಹದೇವ ಬಿದರಿ(32)ಮಹದೇವ ತಾಯಿ ಯಮನವ್ವ ಬಿದರಿ(58) ಮೃತ ದುರ್ದೈವಿಗಳು.
ಜಮಖಂಡಿಯಿಂದ ವಿಜಯಪುರಕ್ಕೆ ಹೊರಟಿದ್ದ ಐ10 ಕಾರು ಜಮಖಂಡಿ-ವಿಜಯಪುರ ಮಾರ್ಗದಲ್ಲಿ ಮೊದಲು ಒಂದು ಬೈಕ್ಗೆ ಡಿಕ್ಕಿ ಹೊಡೆದು, ಮತ್ತೆ ಅದೇ ಮಾರ್ಗದ ನೂರು ಮೀಟರ್ ದೂರದಲ್ಲಿ ಮತ್ತೊಂದು ಬೈಕ್ಗೆ ಡಿಕ್ಕಿಯಾಗಿದೆ. ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post