ನವದೆಹಲಿ: ನೂತನ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ಗೆ ಭಾರೀ ಮುಜುಗರ ಆಗಿದೆ.
ಪ್ರತಿಭಟನಾ ಸ್ಥಳ ಸಿಂಘು ಬಾರ್ಡರ್ಗೆ ಲುಧಿಯಾನಾ ಸಂಸದ ರವ್ನೀತ್ ಸಿಂಘ್ ಬಿಟ್ಟು ಭೇಟಿ ನೀಡಿದ್ದರು. ಈ ವೇಳೆ ರೈತ ಸಂಘಟನೆಗಳ ಕಾರ್ಯಕರ್ತರು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಸಂಸದರನ್ನ ಕಟು ಶಬ್ದಗಳಲ್ಲಿ ಪ್ರತಿಭಟನಾ ನಿರತ ರೈತರು ನಿಂದಿಸಿದ್ದಾರೆ. ಅಲ್ಲದೇ ಸಂಸದರನ್ನ ತಳ್ಳಾಡುತ್ತಿರುವ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಇದೀಗ ಎಲ್ಲೆಡೆ ವೈರಲ್ ಆಗಿದೆ. ನೂತನ ಕೃಷಿ ಕಾನೂನನ್ನ ವಾಪಸ್ ಪಡೆಯುವಂತೆ ಆಗ್ರಹಿಸಿ ನವೆಂಬರ್ 26ರಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post