ಧಾರವಾಡ: ರಾಷ್ಟ್ರೀಯ ಹೆದ್ದಾರಿ 48ರ ಇಟ್ಟಿಗಟ್ಟಿ ಕ್ರಾಸ್ ಬಳಿ ನಡೆದ ಭೀಕರ ದುರಂತ ಪ್ರಕರಣದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು, ಮಾಜಿ ಶಾಸಕ ಹೆಚ್.ಎಮ್ ಚಂದ್ರಶೇಖರಪ್ಪನವರ ಸೊಸೆ, ವೇದ ಮಂಜುನಾಥ್ ಇಂದು ಸಾವನ್ನಪ್ಪಿದ್ದಾರೆ.
ಜನವರಿ 15ರಂದು ದಾವಣಗೆರೆ ಮೂಲದ 15ಮಂದಿ ಬಾಲ್ಯದ ಸ್ನೇಹಿತೆಯರು ಗೋವಾಕ್ಕೆ ಹೊರಟ್ಟಿದ್ದರು. ಆದರೆ ದುರಾದೃಷ್ವವಶಾತ್ ಸಂಭವಿಸಿದ ಭಾರೀ ಅಪಘಾತದಲ್ಲಿ ಅಂದು 11 ಮಂದಿ ಸಾವನ್ನಪ್ಪಿದ್ದರು. ಇನ್ನುಳಿದವರನ್ನು ವಿವಿಧ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೇದ ಮಂಜುನಾಥ್ರನ್ನ ಹುಬ್ಬಳ್ಳಿಯಿಂದ ಏರ್ ಆಂಬ್ಯುಲೆನ್ಸ್ ಮೂಲಕ ಬೆಂಗಳೂರಿಗೆ ಕರೆತಂದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post