ಬೆಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರಾಗಿರುವ ಜಿ.ಟಿ ದಿನೇಶ್ ಕುಮಾರ್ ವಿರುದ್ಧ ಪತ್ನಿ ಕೊಲೆಯತ್ನ ಆರೋಪ ಮಾಡಿದ್ದಾರೆ. ದಿನೇಶ್ ಅವರ ಪತ್ನಿ ದೀಪ್ತಿ ಆರ್.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ವರದಕ್ಷಿಣೆ ಕಿರುಕುಳ IPC 498A ಹಾಗೂ ಕೊಲೆಯತ್ನ 307 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಮೂಲತಃ ಚಿತ್ರದುರ್ಗದ ಸಂತೇಬೆನ್ನೂರಿನವರಾದ ದೀಪ್ತಿ ಹಾಗೂ ದಿನೇಶ್ ಕುಮಾರ್ಗೆ 2015ರಲ್ಲಿ ಒಟ್ಟು ಆರು ಕೆಜಿ ಚಿನ್ನಾಭರಣ ನೀಡಿ ಅದ್ದೂರಿಯಾಗಿ ಮದುವೆ ಮಾಡಲಾಗಿತ್ತು. ಇತ್ತೀಚೆಗೆ ದಂಪತಿ ನಡುವೆ ಹಲವು ಬಾರಿ ಜಗಳವಾಗಿ ಹಿರಿಯರು ರಾಜಿಸಂಧಾನ ಮಾಡಿದ್ದರು. ಬಳಿಕ ದೀಪ್ತಿ ಆರ್.ಆರ್ ನಗರದ ತಮ್ಮ ತಾಯಿ ಮನೆಗೆ ಬಂದಿದ್ದರಂತೆ.
ಜನವರಿ 22ರಂದು ದೀಪ್ತಿ ಇರುವಲ್ಲಿಗೆ ಬಂದಿರುವ ದಿನೇಶ್ ಸುಸ್ತು ಹೋಗಲಾಡಿಸುವ ಪೌಡರ್ ಎಂದು ನೀರಿನಲ್ಲಿ ಮತ್ತು ಬರುವ ಮಾತ್ರೆ ಹಾಕಿ ನೀಡಿದ್ದಾರೆ ಎನ್ನಲಾಗಿದೆ. ಕೆಲ ಕ್ಷಣಗಳ ನಂತರ ದೀಪ್ತಿ ಪ್ರಜ್ಞಾಹೀನಳಾಗಿ ಮನೆಯಲ್ಲಿ ಕುಸಿದು ಬಿದಿದ್ದು, ಪೋಷಕರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಿರುವ ವೈದ್ಯರು ನೀರಿನಲ್ಲಿ ಮಾತ್ರೆ ಬೆರೆಸಿರೋ ಬಗ್ಗೆ ತಿಳಿಸಿದ್ದಾರೆ ಎನ್ನಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post