ಸೌಥ್ ಆಫ್ರಿಕನ್ ಬ್ಯಾಟ್ಸ್ಮ್ಯಾನ್, ಮಿಸ್ಟರ್ 360 ಡಿಗ್ರಿ ಎಬಿ ಡಿವಿಲಿಯರ್ಸ್ ಐಪಿಎಲ್ನಲ್ಲಿ ಹೊಸ ದಾಖಲೆಯನ್ನ ಕ್ರಿಯೇಟ್ ಮಾಡಿದ್ದಾರೆ. ಇತ್ತೀಚೆಗೆ 2021ರ ಐಪಿಎಲ್ ಸರಣಿಗೆ ಸ್ಫೋಟಕ ಬ್ಯಾಟ್ಸ್ಮನ್ ಎಬಿಡಿಯನ್ನ ಆರ್ಸಿಬಿ ಉಳಿಸಿಕೊಂಡಿದೆ. ಈ ಮೂಲಕ ಐಪಿಎಲ್ನಲ್ಲಿ 100 ಕೋಟಿಗೂ ಹೆಚ್ಚು ಹಣ ಪಡೆದ ಮೊದಲ ವಿದೇಶಿ ಕ್ರಿಕೆಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವರದಿಗಳ ಪ್ರಕಾರ ಈಗಾಗಲೇ ಭಾರತದ ನಾಲ್ವರು ಆಟಗಾರರು 100 ಕೋಟಿಗೂ ಅಧಿಕ ಹಣ ಗಳಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಚೆನ್ನೈ ತಂಡದ ಸುರೇಶ್ ರೈನಾ 100ಕೋಟಿಗೂ ಹೆಚ್ಚು ಹಣವನ್ನ ಸಂಪಾದನೆ ಮಾಡಿದ್ದಾರೆ, ಮಾಡುತ್ತಿದ್ದಾರೆ ಎನ್ನಲಾಗಿದೆ.
ಎಬಿಡಿಗೆ ಆರ್ಸಿಬಿ ತಂಡ ಒಂದು ಸೀಜನ್ನಲ್ಲಿ 11 ಕೋಟಿಯನ್ನ ಪಾವತಿಸುತ್ತದೆ. ಈ ಮೂಲಕ ಇವರು 102.5 ಕೋಟಿ ಗಳಿಸಿದ್ದಾರೆ ಅಂತಾ ವರದಿಯಾಗಿದೆ. ಐಪಿಎಲ್ನಲ್ಲಿ 169 ಮ್ಯಾಚ್ಗಳನ್ನ ಆಡಿರುವ ಎಬಿಡಿ 4849 ರನ್ಗಳಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post