ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಮಾವ ಸವದತ್ತಿಯ ಗಂಗಣ್ಣ ಶಿಂತ್ರಿ ಇಂದು ಬೆಳಗ್ಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಈ ಹಿನ್ನೆಲೆ ಕೋರ್ಟ್ನಿಂದ ಅನುಮತಿ ಪಡೆದಿರುವ ವಿನಯ್ ಕುಲಕರ್ಣಿ, ಪೊಲೀಸ್ ಭದ್ರತೆಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.
ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ಗೌಡ ಕೊಲೆ ಪ್ರಕರಣ ಸಂಬಂಧ ಜೈಲುಪಾಲಾಗಿರುವ ವಿನಯ್ ಕುಲಕರ್ಣಿ, ಮಾವನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅನುಮತಿ ಕೋರಿ ಧಾರವಾಡ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಕೋರ್ಟ್ ನಾಲ್ಕು ಗಂಟೆ ಸಮಯವಕಾಶ ನೀಡಿದೆ.
ಇನ್ನು ಅಂತ್ಯಕ್ರಿಯೆ ಮಗಿದ ನಂತರ ಪೊಲೀಸರು ವಿನಯ್ ಕುಲಕರ್ಣಿರನ್ನ ವಾಪಸ್ ಹಿಂಡಲಗಾ ಜೈಲಿಗೆ ಕರೆ ತರಲಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post