ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಲಿಂಕ್ ಕೇಸ್ ಸಂಬಂಧ ಮತ್ತೆ ವಿಚಾರಣೆಗೆ ಹಾಜರಾಗವಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ಗೆ ಸಿಸಿಬಿ ನೋಟೀಸ್ ನೀಡಿದೆ.
ಸಿಸಿಬಿ ಡಿಸಿಬಿ ಬಸವರಾಜ್ ಅಂಗಡಿ ಅವರ ಮುಂದೆ ಇಂದು ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ಇಂದ್ರಜಿತ್ಗೆ ಸೂಚಿಸಲಾಗಿದೆ. ಈ ಹಿಂದೆ ಇದೇ ಪ್ರಕರಣ ಸಂಬಂಧ ಇಂದ್ರಜಿತ್ ಲಂಕೇಶ್ ಎರಡು ಬಾರಿ ಸಿಸಿಬಿ ಮುಂದೆ ಹಾಜರಾಗಿದ್ದರು, ಮತ್ತೊಮ್ಮೆ ಕರೆದರೆ ಬರುವುದಾಗಿಯೂ ತಿಳಿಸಿದ್ದರು.
ಆಗಸ್ಟ್ 31ರಂದು ಮೊದಲ ಬಾರಿಗೆ ಸಿಸಿಬಿ ಮುಂದೆ ಹಾಜರಾಗಿದ್ದ ಇಂದ್ರಜಿತ್ ಕೇವಲ ಮೌಖಿಕವಾಗಿ ಡ್ರಗ್ಸ್ ಜಾಲದಲ್ಲಿ ತಡಗಿದ್ದಾರೆನ್ನಲಾದ ಸುಮಾರು 15 ನಟ ನಟಿಯರ ಹೆಸರನ್ನ ತಿಳಿಸಿದ್ರು ಎನ್ನಲಾಗಿತ್ತು. ನಂತರ ಸೆಪ್ಟೆಂಬರ್ 2 ರಂದು ಸಿಸಿಬಿ ಮತ್ತೆ ನೋಟಿಸ್ ನೀಡಿ ಇಂದ್ರಜಿತ್ರನ್ನ ಕರೆದು ಮಾಹಿತಿ ಪಡೆದಿತ್ತು
ಸದ್ಯ ಪ್ರಕರಣ ಸಂಬಂಧ ಮತ್ತಷ್ಟು ಮಾಹಿತಿಗಳನ್ನು ಪಡೆಯುವ ಸಲುವಾಗಿ ಸಿಸಿಬಿ ಮತ್ತೊಮ್ಮೆ ಲಂಕೇಶ್ಗೆ ಬುಲಾವ್ ನೀಡಿದೆ ಎನ್ನಲಾಗಿದೆ. ಹೀಗಾಗಿ ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಇಂದ್ರಜಿತ್ ಲಂಕೇಶ್ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಲಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post