ನವದೆಹಲಿ: ರೈತ ಪ್ರತಿಭಟನೆಯ ಹಾದಿ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಜನವರಿ 25ವರೆಗೆ ಸರಾಗವಾಗಿ ನಡೆಯುತ್ತಿದ್ದ ಪ್ರತಿಭಟನೆ 26ರಿಂದ ವಿಭಿನ್ನ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಇಂದು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನ ಬಿಕೆಯು ಸಂಘಟನೆ ಭೇಟಿ ಮಾಡಿದೆ.
ಭಾರತೀಯ ಕಿಸಾನ್ ಯೂನಿಯನ್ (ಲೋಕ ಶಕ್ತಿ), ಬಿಕೆಯು (ಎಕ್ತಾ) ಕೇಂದ್ರ ಸಚಿವರನ್ನ ಭೇಟಿ ಮಾಡಿದೆ. ಈ ವೇಳೆ ಕೆಂಪುಕೋಟೆಯಲ್ಲಿ ನಡೆದ ಘಟನೆ ನಮ್ಮನ್ನ ಘಾಸಿ ಮಾಡಿದೆ. ಸರ್ಕಾರ ಕೃಷಿ ಕಾನೂನು ಕುರಿತು ಚರ್ಚೆ ಮಾಡಲು ನಮಗೆ ಅವಕಾಶ ಕೊಡಬೇಕು ಅಂತಾ ಕೇಂದ್ರ ಸಚಿವರ ಬಳಿ ಮನವಿ ಮಾಡಿಕೊಂಡಿದ್ದಾರೆ ಅಂತಾ ವರದಿಯಾಗಿದೆ.
ಇನ್ನು ಬಿಕೆಯು ಲೋಕಸಕ್ತಿ ಪ್ರತಿಭಟನೆಯನ್ನ ವಾಪಸ್ ಪಡೆದುಕೊಳ್ಳುತ್ತಿರೋದಾಗಿ ಘೊಷಣೆ ಮಾಡಿದೆ. ಅಂತೆಯೇ ಪ್ರತಿಭಟನಾ ಸ್ಥಳದಿಂದ ಸಂಘನಾ ಕಾರ್ಯಕರ್ತರೆಲ್ಲರೂ ವಾಪಸ್ ಆಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post