‘ವಿಕ್ರಾಂತ್ ರೋಣ..’ ಈ ಹೆಸರು ಈಗ ಪ್ರತಿಯೊಬ್ಬ ಕನ್ನಡಿಗನಿಗೂ ಪರಿಚಿತ. ದುಬೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕಿಚ್ಚನ ಫ್ಯಾಂಟಮ್, ‘ವಿಕ್ರಾಂತ್ ರೋಣ’ನಾಗಿ ಬದಲಾಗಿದೆ. ವಿಶ್ವದ ಅತೀ ಎತ್ತರದ ಕಟ್ಟಡ ಬುರ್ಜ್ ಖಲೀಫಾದ ಮೇಲೆ ವಿಕ್ರಾಂತ್ ರೋಣನ ಆರ್ಭಟ ಜೋರಾಗಿತ್ತು. ಇದೀಗ ಆರು ಭಾಷೆಗಳಲ್ಲಿ ರಿಲೀಸ್ ಮಾಡಲು ತಯಾರಾಗಿರುವ ಸುದ್ದಿಯ ಜೊತೆ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು.. ಕಿಚ್ಚನ ‘ವಿಕ್ರಾಂತ್ ರೋಣ’ ಆರು ಭಾಷೆಗಳಲ್ಲಿ ಅಬ್ಬರಿಸಲು ಸಜ್ಜಾಗ್ತಿದ್ದಾನೆ. ಸದ್ಯ ಆರು ಭಾಷೆಗಳಲ್ಲಿ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಿದೆ ಚಿತ್ರತಂಡ.
#VikrantRona
Kannada, Hindi & English logohttps://t.co/eBRHwzi5XW pic.twitter.com/cIm8SN8sBx— Kichcha Sudeepa (@KicchaSudeep) February 1, 2021
‘ವಿಕ್ರಾಂತ್ ರೋಣ’ ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ಈ ಬಗ್ಗೆ ಟ್ವೀಟ್ ಮಾಡಿ ಅಭಿಮಾನಿಗಳಿಗೆ ಮತ್ತೆ ಸಿಹಿ ಸುದ್ದಿ ನೀಡಿದ್ದಾರೆ. ಈ ಹಿಂದೆ ಬೇಡಿಕೆ ಇರುವ ಎಲ್ಲಾ ಭಾಷೆಗಳಲ್ಲಿ ರಿಲೀಸ್ ಮಾಡೋದಾಗಿ ಅನೂಪ್ ಭಂಡಾರಿ ನ್ಯೂಸ್ ಫಸ್ಟ್ ಜೊತೆ ಹಂಚಿಕೊಂಡಿದ್ದರಾದರೂ, ಯಾವ್ಯಾವ ಭಾಷೆಗಳಲ್ಲಿ ರಿಲೀಸ್ ಆಗಲಿದೆ ಅನ್ನೋದನ್ನ ಸ್ಪಷ್ಟ ಪಡಿಸಿರಲಿಲ್ಲ. ಇದೀಗ ಪ್ರಮುಖ ಆರು ಭಾಷೆಗಳಲ್ಲಿ ‘ವಿಕ್ರಾಂತ್ ರೋಣ’ ತೆರೆ ಮೇಲೆ ಬರ್ತಿರೋದು ಕನ್ಫರ್ಮ್ ಆಗಿದೆ. ಕನ್ನಡ, ತಮಿಳು, ಹಿಂದಿ, ತೆಲುಗು, ಇಂಗ್ಲೀಷ್ ಹಾಗೂ ಮಲಯಾಳಂನಲ್ಲಿ ‘ವಿಕ್ರಾಂತ್ ರೋಣ’ನ ಅಡ್ವೆಂಚರ್ಸ್ ಬೆಳ್ಳಿ ತೆರೆ ಮೇಲೆ ಕಣ್ಮನ ಸೆಳೆಯಲಿದೆ. ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ‘ವಿಕ್ರಾಂತ್ ರೋಣ’ ಥಿಯೇಟರ್ಗೆ ಲಗ್ಗೆ ಇಡಲಿದ್ದಾನೆ.
Malayalam, Tamil & Telugu logos#VikrantRona https://t.co/eBRHwzi5XW pic.twitter.com/Z07SEstdp6
— Kichcha Sudeepa (@KicchaSudeep) February 1, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post