ಬಾದ್ ಶಾ ಕಿಚ್ಚ ಸುದೀಪ್ ಬಹು ನಿರೀಕ್ಷಿತ ‘ವಿಕ್ರಾಂತ್ ರೋಣ’ ಸಿನಿಮಾದ ಹೊಸ ಟೈಟಲ್ ಪೋಸ್ಟರ್ ರಿಲೀಸ್ ಆಗಿದೆ. ಫ್ಯಾಂಟಮ್ ಹೆಸರಿನಲ್ಲಿ ಶೂಟಿಂಗ್ ನಡೆಸಿರುವ ಚಿತ್ರತಂಡ, ಚಿತ್ರದ ಪಾತ್ರ ವಿಕ್ರಾಂತ್ ರೋಣನ ಮೇಲೆ ಜನ ತೋರಿದ ಪ್ರೀತಿಗೆ, ಸಿನಿಮಾದ ಟೈಟಲ್ ಅನ್ನ ‘ವಿಕ್ರಾಂತ್ ರೋಣ’ ಅಂತ ಚೇಂಜ್ ಮಾಡಲಾಗಿದೆ. ಸದ್ಯ ಹೊಸ ಟೈಟಲ್ ಪೋಸ್ಟರ್ ರಿಲೀಸ್ ಆಗಿದ್ದು, ಅಭಿಮಾನಿಗಳು ಹೊಸ ಟೈಟಲ್ ಅನ್ನು ಚಿತ್ರದ ನಾಯಕ ವಿಕ್ರಾಂತ್ ರೋಣನಂತೆ ಮನಸ್ಪೂರ್ತಿಯಾಗಿ ಸ್ವೀಕರಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿದ್ದೇ, ಬುರ್ಜ್ ಖಲೀಫಾ ಮೇಲೆ ‘ವಿಕ್ರಾಂತ್ ರೋಣ’ನ ಝಲಕ್ಗೆ ಸಿಕ್ಕಂತ ಅಭಿಮಾನಿಗಳ ಆರ್ಭಟ.
ಹೌದು..ನಿನ್ನೆ ರಾತ್ರಿ 9.45ರ ಸುಮಾರಿಗೆ ‘ವಿಕ್ರಾಂತ್ ರೋಣ’ನ ಸಣ್ಣ ಝಲಕ್ವೊಂದು ದುಬೈನ ಬುರ್ಜ್ ಖಲೀಫಾದ ಮೇಲೆ ರಾರಾಜಿಸಿದೆ. ಇದರ ಜೊತೆಗೆ ಕನ್ನಡ ಚಿತ್ರರಂಗದಲ್ಲಿ 25 ವರ್ಷಗಳನ್ನ ಪೂರೈಸಿದ ಕಿಚ್ಚನಿಗೆ ಬುರ್ಜ್ ಖಲೀಫಾದ ಮೇಲೆಯೇ ಗೌರವ ಸಲ್ಲಿಸಿ ಸರ್ಪ್ರೈಸ್ ನೀಡಲಾಗಿತ್ತು. ಇದೆಲ್ಲದಕ್ಕೆ ಸಾಕ್ಷಿಯಾಗಿದ್ದು ಕಿಚ್ಚನ ಅಭಿಮಾನಿಗಳು. ದುಬೈನಲ್ಲಿ ಮಾತ್ರವಲ್ಲದೇ ಭಾರತದಲ್ಲೂ ಎಲ್ಲಾ ಅಭಿಮಾನಿಗಳು ‘ವಿಕ್ರಾಂತ್ ರೋಣ’ನ ಒಂದು ಝಲಕ್ ನೋಡೋದಕ್ಕೆ ಕಾದು ಕುಳಿತಿದ್ದರು.
ಸದ್ಯ, ‘ವಿಕ್ರಾಂತ್ ರೋಣ’ನ ಹೊಸ ಟೈಟಲ್ ಏನೋ ಅನಾವರಣಗೊಂಡಿದೆ. ಇನ್ನು ‘ವಿಕ್ರಾಂತ್ ರೋಣ’ ತೆರೆ ಮೇಲೆ ಯಾವಾಗ ಬರಲಿದ್ದಾರೆ ಅನ್ನೋ ಪ್ರಶ್ನೆಗೂ ಕಿಚ್ಚ ಉತ್ತರಿಸಿದ್ದಾರೆ. ಯೆಸ್.. ಈಗ ‘ವಿಕ್ರಾಂತ್ ರೋಣ’ ಸಿನಿಮಾದ ಒಂದಷ್ಟು 3D ಕೆಲಸಗಳು ನಡೆಯುತ್ತಿದ್ದು, ಆಗಸ್ಟ್ ಅಥವಾ ಸೆಪ್ಟೆಂಬರ್ಗೆ ಸಿನಿಮಾ ಬಿಡುಗಡೆಯಾಗಲಿದೆ. ನಿರ್ದೇಶಕ ಅನೂಪ್ ಭಂಡಾರಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಶಾಲಿನಿ ಮಂಜುನಾಥ್ ನಿರ್ಮಾಣ ಮಾಡಿದ್ದಾರೆ. ಕಿಚ್ಚನ ಜೊತೆ ನಿರೂಪ್ ಭಂಡಾರಿ ಹಾಗೂ ನೀತಾ ಅಶೋಕ್ ನಟಿಸಿದ್ದಾರೆ. ಬಿ.ಅಜನೀಶ್ ಲೋಕ್ನಾಥ್ ಸಂಗೀತ ಚಿತ್ರಕ್ಕಿರಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post