ರಾಯಚೂರು: ರಾಮಮಂದಿರ ನಿರ್ಮಾಣ ಸಂಸ್ಕೃತಿಯ ಪುನರುತ್ಥಾನದ ಪ್ರತೀಕವಾಗಿದೆ ಎಂದು ಉಡುಪಿ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ತಿಳಿಸಿದ್ದಾರೆ.
ಇಂದು ರಾಯಚೂರಿನಲ್ಲಿ ಮಾತನಾಡಿದ ಶ್ರೀಗಳು ರಾಮ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣದ ದೊಡ್ಡ ಕಾರ್ಯ ಪ್ರಾರಂಭವಾಗಿದೆ. ಮಂದಿರ ನಿರ್ಮಾಣಕ್ಕೆ ರಾಮ ಭಕ್ತರು ನಾ ಮುಂದು ತಾ ಮುಂದು ಅಂತ ನಿಧಿಗೆ ಸಮರ್ಪಣೆ ನೀಡುತ್ತಿದ್ದಾರೆ. ಎಷ್ಟೋ ರಾಮ ಭಕ್ತರು ಈಗಾಗಲೇ ನಿಧಿ ಸಮರ್ಪಣೆ ಮಾಡಿದ್ದಾರೆ, ಸದ್ಯ 500 ಕೋಟಿ ರೂಪಾಯಿಗೂ ಅಧಿಕ ನಿಧಿ ಸಂಗ್ರಹಣೆ ಆಗಿದೆ. ನಿಧಿ ಸಂಗ್ರಹಣೆ ಅಭಿಯಾನ ಇನ್ನೂ 15 ದಿನಗಳ ಕಾಲ ಮುಂದುವರೆಯಲಿದೆ, ಈ ಅಭಿಯಾನ ಕೇವಲ ರಾಮ ಮಂದಿರ ನಿರ್ಮಾಣಕ್ಕಷ್ಟೇ ಸಿಮೀತವಾಗುವುದಿಲ್ಲ. ನಮ್ಮ ಸನಾತನ ಸಂಸ್ಕೃತಿಯೂ ಮಂದಿರದ ನಿರ್ಮಾಣದ ಜೊತೆಗೆ ಪುನರ್ ನಿರ್ಮಾಣ ಆಗಬೇಕು, ಎಲ್ಲರೂ ಸನಾತನ ಸಂಸ್ಕೃತಿಯನ್ನು ಅರ್ಥಹಿಸಿಕೊಂಡು ಆಚರಿಸಬೇಕು. ಮುಂದಿನ ದಿನಗಳಲ್ಲಿಯೂ ನಮ್ಮ ಸಂಸ್ಕೃತಿ ಉಳಿಯಬೇಕಾಗಿದೆ, ರಾಮ ಮಂದಿರ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಿದ್ದಾರೆ ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post