ನವದೆಹಲಿ: ಕಳೆದ ವರ್ಷ ಲಡಾಖ್ ಗಡಿಯಲ್ಲಿ ಚೀನಾ ಮಾಡಿದ ಕಿರಿಕ್ ನಂತರ ಮಿಲಿಟರಿ ಮಟ್ಟದಲ್ಲಿ ಬರೋಬ್ಬರಿ 9 ಬಾರಿ ಉಭಯ ದೇಶಗಳ ಮಧ್ಯೆ ಮಾತುಕತೆ ನಡೆದಿದೆ. ಭಾರತ ಸವಾಲುಗಳನ್ನ ಎದುರಿಸಲು ಬಹಳ ದೊಡ್ಡ ಪ್ರಮಾಣದಲ್ಲಿ ಸೈನಿಕರನ್ನ ನಿಯೋಜಿಸಲಾಗಿದೆ ಅಂತಾ ವಿದೇಶಾಂಗ ವ್ಯವಹಾರಗಳ ಸಚಿವ ಜೈ ಶಂಕರ್ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ಹಿರಿಯ ಮಿಲಿಟರಿ ವಕೀಲರ ಜೊತೆ ಹಲವು ಸುತ್ತಿನ ಮಾತುಕತೆಗಳು ಚೀನಾ ಮತ್ತು ಭಾರತದ ಮಧ್ಯೆ ನಡೆದಿದೆ. ಆದರೆ ಪೂರ್ವ ಲಡಾಖ್ ಗಡಿಯಲ್ಲಿ ಉಂಟಾಗಿರುವ ಗೊಂದಲದ ವಾತಾವರಣ ಹಾಗೇ ಮುಂದುವರಿದಿದೆ.
ಇದು ತುಂಬಾ ಸಂಕೀರ್ಣ ವಿಷಯವಾಗಿದೆ. ಯಾಕಂದ್ರೆ ಇದು ಸೈನಿಕರ ಮೇಲೆ ನಿಂತಿದೆ. ನೀವು ಜಿಯೋಗ್ರಫಿ ಬಗ್ಗೆ ತಿಳಿದುಕೊಳ್ಳಬೇಕಿದೆ. ಯಾವ ಭಾಗ ಏನಾಗುತ್ತಿದೆ ಅನ್ನೋದನ್ನ ತಿಳಿದುಕೊಳ್ಳಬೇಕು. ಅದನ್ನ ಮಿಲಿಟರಿ ಕಮಾಂಡ್ಗಳು ಮಾಡುತ್ತಿವೆ ಅಂತಾ ಹೇಳಿದರು.
ಕಳೆದ ಬಾರಿ ನಡೆದ ಮಾತುಕತೆಗಳು ವಿಫಲವಾದಾಗ ನಾವು ಚೀನಾಗೆ ಖಡಕ್ ಸಂದೇಶ ಸಾರುವ ಹಿನ್ನೆಲೆಯಲ್ಲಿ ತುಂಬಾ ದೊಡ್ಡ ಪ್ರಮಾಣದಲ್ಲಿ ಮಿಲಿಟರಿ ಪಡೆಯನ್ನ ನಿಯೋಜಿಸಬೇಕಾಯಿತು. ಈಗಲೂ ಕೂಡ ಮಾತುಕತೆ ಮುಂದುವರಿದಿದೆ. ಒಂದು ಪ್ರಗತಿ ಕಾಣುವ ನಿರೀಕ್ಷೆ ಇದೆ ಅಂತಾ ಹೇಳಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸಚಿವ ಜೈ ಶಂಕರ್ ಇಬ್ಬರೂ ಕೂಡ ಚೀನಾದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಯಿಂದಾಗಿ ಸಣ್ಣಪುಟ್ಟ ಬದಲಾವಣೆಗಳಾಗಿವೆ ಅಷ್ಟೇ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಲಡಾಖ್ ಗಡಿಯಲ್ಲಿನ ಬೆಳವಣಿಗೆಗಳು ಬದಲಾಗಿಲ್ಲ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post