ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳ್ತಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ‘ಸಲಾರ್.’ ‘ಸಲಾರ್’ ಪಾತ್ರದಲ್ಲಿ ಡಾರ್ಲಿಂಗ್ ಪ್ರಭಾಸ್ ಕಾಣಿಸಿಕೊಳ್ತಿದ್ದು, ನಾಯಕಿಯಾಗಿ ಶ್ರುತಿ ಹಾಸನ್ ನಟಿಸ್ತಿದ್ದಾರೆ. ಆದ್ರೆ, ಪ್ರಭಾಸ್ ಜೊತೆ ಯಾರು ಗುದ್ದಾಡಲಿದ್ದಾರೆ, ಅಂದ್ರೆ ‘ಸಲಾರ್’ ಸಿನಿಮಾದಲ್ಲಿ ವಿಲನ್ ಆಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ದೊಡ್ಡ ಪ್ರಶ್ನೆಯಾಗಿತ್ತು. ಆರಡಿ ಉದ್ದದ ಪ್ರಭಾಸ್ಗೆ ಯಾರು ಸೆಡ್ಡು ಹೊಡಯುತ್ತಾರೆ ಅನ್ನೋ ಕನ್ಫ್ಯೂಷನ್ಗೆ ಕೊನೆಗೂ ಉತ್ತರ ಸಿಕ್ಕಿದೆ. ಅದಕ್ಕೂ ಖುಷಿ ವಿಚಾರ ಏನಪ್ಪ ಅಂದ್ರೆ, ಕನ್ನಡದ ನಟನೇ ಪ್ರಭಾಸ್ಗೆ ವಿಲನ್ ಆಗಿ ಕಾಡಲಿರೋದು. ಹೌದು.. ನಟ ಮಧು ಗುರುಸ್ವಾಮಿ ‘ಸಲಾರ್’ ಸಿನಿಮಾದ ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ವಿಚಾರ ಅವರ ಪೋಸ್ಟ್ನಿಂದ ತಿಳಿದು ಬರ್ತಿದೆ.
ಈ ಹಿಂದೆ ಎ.ಹರ್ಷ ನಿರ್ದೇಶನದ ‘ಭಜರಂಗಿ’, ‘ವಜ್ರಕಾಯ’ ಸಿನಿಮಾಗಳಲ್ಲಿ ನಟಿಸಿದ್ದ ಮಧು ಗುರುಸ್ವಾಮಿ ‘ಸಲಾರ್’ ಸಿನಿಮಾದಲ್ಲಿ ವಿಲನ್ ಆಗಲಿದ್ದಾರೆ ಅನ್ನೋ ಅನುಮಾನ ಶುರುವಾಗಿದೆ. ಈ ಬಗ್ಗೆ ಮಧು ಗುರುಸ್ವಾಮಿ ತಮ್ಮ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು, ‘ಸಲಾರ್’ ಸಿನಿಮಾದ ಭಾಗವಾಗಿರೋದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಈಗಾಗಲೇ ‘ಸಲಾರ್’ ಸಿನಿಮಾದ ಚಿತ್ರೀಕರಣ ಶುರುವಾಗಿದ್ದು, ಗೋದಾವರಿ ಗಣಿಯಲ್ಲಿ ಶೂಟಿಂಗ್ ನಡೆಯುತ್ತಿದೆ.
ಅಂದ್ಹಾಗೇ, ಈ ಹಿಂದೆ ‘ಸಲಾರ್’ ಸಿನಿಮಾದ ವಿಲನ್ ಅಗಿ ನಟ ವಿಜಯ್ ಸೇತುಪತಿ ಹೆಸರು ಕೇಳಿ ಬರ್ತಿತ್ತು. ತಳಪತಿ ವಿಜಯ್ ನಟನೆಯ ‘ಮಾಸ್ಟರ್’ ಸಿನಿಮಾದಲ್ಲಿ ವಿಜಯ್ ಸೇತುಪತಿ ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಂಡಿರೋದಕ್ಕೋ ಏನೋ, ಈ ಸುದ್ದಿ ಚಾಲ್ತಿಯಲ್ಲಿತ್ತು. ಆದ್ರೀಗ ಎಲ್ಲಾ ಗೊಂದಲಕ್ಕೂ ಉತ್ತರ ಸಿಕ್ಕಿದಂತಿದೆ. ಒಂದಷ್ಟು ಸಿನಿಮಾಗಳಲ್ಲಿ ನೆಗೆಟಿವ್ ಪಾತ್ರಗಳಲ್ಲಿ ನಟಿಸಿರುವ ಮಧು ಗುರುಸ್ವಾಮಿ ‘ಸಲಾರ್’ ಚಿತ್ರದ ವಿಲನ್ ಆಗಿರೋದು ಇದೀಗ ಓಡಾಡ್ತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post