ಉಡುಪಿ: ಜನವರಿ 15 ರಂದು ದೇಶಾದ್ಯಂತ ಆರಂಭವಾಗಿದ್ದ ಅಯೋಧ್ಯೆಯ ರಾಮಮಂದಿರ ನಿರ್ಮಾಣದ ನಿಧಿ ಸಂಗ್ರಹ ಕಾರ್ಯ ಆರಂಭವಾಗಿತ್ತು. ಸದ್ಯ ಈ ನಿಧಿಯಲ್ಲಿ 1000 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಅಭಿಯಾನದ ನೇತೃತ್ವವಹಿಸಿರುವ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸ್ವಾಮೀಜಿಗಳು.. ಈ ನಿಧಿ ಸಂಗ್ರಹಣೆಯ ಅಭಿಯಾನವನ್ನ ನಾವು ದಕ್ಷಿಣ ಭಾರತದಾದ್ಯಂತ ಸಂಚಾರ ನಡೆಸಿದ್ದೇವೆ. ದಕ್ಷಿಣ ಭಾರತ ಮಾತ್ರವಲ್ಲದೆ ಇಡೀ ದೇಶದಲ್ಲಿಯೇ ಸಿರಿವಂತರು, ನಾಡಿನ ಪ್ರಥಮ ಪ್ರಜೆಗಳಿಂದ ಹಿಡಿದು ಜನಸಾಮಾನ್ಯರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ.
ಹಿಂದುಗಳು ಮಾತ್ರವಲ್ಲದೇ ಇತರರಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಫೆಬ್ರುವರಿ 27 ರವರೆಗೆ ನಿಧಿ ಸಂಗ್ರಹ ಅಭಿಯಾನ ಮುಂದುವರಿಯಲಿದೆ. ನಾವು ಅಂದು ಕೊಂಡಂತೆ ಒಂದೂವರೆ ಸಾವಿರ ಕೋಟಿ ರೂಪಾಯಿಯ ಗಡಿಯನ್ನು ಶೀಘ್ರವೇ ತಲುಪುವ ಸಾಧ್ಯತೆ ಇದೆ. ಕೇವಲ ರಾಮಮಂದಿರ ಮಾತ್ರವಲ್ಲ ರಾಮರಾಜ್ಯವನ್ನು ಕಟ್ಟುವ ಗುರಿ ನಮ್ಮ ಮುಂದಿದೆ. ಹೆಚ್ಚುವರಿಯಾಗಿ ಬಂದ ಹಣವನ್ನು ಹೇಗೆ ಬಳಸಿಕೊಳ್ಳಬೇಕೆಂದು ಟ್ರಸ್ಟ್ ನಿರ್ಧರಿಸುತ್ತದೆ ಎಂದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post