ನವದೆಹಲಿ: ಗಾಲ್ವಾನ್ ಱಲಿಯಲ್ಲಿ ನಡೆದ ಘರ್ಷಣೆಯಲ್ಲಿ ಚೀನಾ, ನಮ್ಮ ಕಡೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಅಂತಾ ಹೇಳಿತ್ತು. ಆದರೆ, ರಷ್ಯಾದ ನ್ಯೂಸ್ ಏಜೆನ್ಸಿ ಟಿಎಎಸ್ಎಸ್ ವರದಿ ಮಾಡಿರುವ ಪ್ರಕಾರ ಸುಮಾರು 45 ಚೀನಾದ ಯೋಧರು ಮೃತಪಟ್ಟಿದ್ದಾರೆ ಅಂತಾ ವರದಿ ಮಾಡಿದೆ.
ಪೂರ್ವ ಲಡಾಖ್ನಲ್ಲಿ ನಿಯೋಜಿಸಲಾಗಿರುವ ಎರಡೂ ಸೇನೆಗಳನ್ನ ಹಿಂದೆ ತೆಗೆದುಕೊಳ್ಳುಲು ಚೀನಾ-ಭಾರತ ನಿರ್ಧರಿಸಿದ ಸುದ್ದಿ ಬಹಿರಂಗವಾದ ಬಳಿಕ, ಟಿಎಎಸ್ಎಸ್ ವರದಿ ಮಾಡಿದೆ. ಆ ವರದಿ ಪ್ರಕಾರ, 2020 ಮೇ ಮತ್ತು ಜೂನ್ನಲ್ಲಿ ಭಾರತ ಹಾಗೂ ಚೀನಾ ಯೋಧರ ಮಧ್ಯೆ ಘರ್ಷಣೆಯಾಗಿತ್ತು. ಭಾರತದ 20 ಯೋಧರು ಹಾಗೂ ಚೀನಾದ 45 ಸೈನಿಕರು ಪ್ರಾಣವನ್ನ ಕಳೆದುಕೊಂಡಿದ್ದಾರೆ ಅಂತಾ ತಿಳಿಸಿದೆ.
ರಷ್ಯಾದ ಈ ನ್ಯೂಸ್ ಎಜೆನ್ಸಿ ಕೆಲವು ಮೀಡಿಯಾಗಳ ವರದಿ ಹಾಗೂ ಅಮೆರಿಕ ಇಂಟಲಿಜೆನ್ಸ್ ನೀಡಿರುವ ವರದಿಗಳ ಕೋಟ್ ಮಾಡಿ ವರದಿ ಮಾಡಿದೆ. ಆದರೆ ಚೀನಾ ಇದೊಂದು ಫೇಕ್ ನ್ಯೂಸ್ ಅಂತಾ ವರದಿ ಮಾಡಿದೆ.
ಗಾಲ್ವಾನ್ ವ್ಯಾಲಿಯಲ್ಲಿ ಘರ್ಷಣೆ ನಡೆದ ಬಳಿಕ ಅಲ್ಲಿನ ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಬರೋಬ್ಬರಿ 9 ತಿಂಗಳ ಬಳಿಕ ಚೀನಾ ಮತ್ತು ಭಾರತ ಕಣಿವೆಯಿಂದ ಹಿಂದೆ ಸರಿಯಲು ನಿರ್ಧರಿಸಿವೆ. ಆದರೆ ಅಂದು ನಡೆದ ಹಾನಿ ಬಗ್ಗೆ ಪೀಪಲ್ಸ್ ಲಿಬರೇಷನ್ ಆರ್ಮಿ ಇದುವರೆಗೂ ಮಾಹಿತಿ ನೀಡಿಲ್ಲ. ಆದರೆ ಭಾರತ 20 ಯೋಧರು ಹುತಾತ್ಮರಾಗಿದ್ದಾರೆ ಅಂತಾ ದೇಶದ ನಾಗರಿಕರಿಗೆ ತಿಳಿಸಿತ್ತು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post