ಗದಗ: 17ನೇ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್ ಕ್ರೀಡಾಕೂಟ ಬಿಂಕದಕಟ್ಟಿ ಗ್ರಾಮದ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಆರಂಭವಾಗಿದೆ. ಮೂರು ದಿನಗಳ ಕಾಲ ನಡೆಯಯವ ಈ ಕ್ರೀಡಾಕೂಟದ ಮೊದಲ ದಿನವೇ ಗದಗ್ನ ಬಾಲಕಿ ಪದಕ ಗಳಿಸಿದ್ದಾಳೆ.
16 ವರ್ಷದ ಬಾಲಕಿಯರಿಗಾಗಿ ನಡೆದ ವೈಯಕ್ತಿಕ ಟಾಯ್ ಟ್ರಾಯಲ್‌ನ 10 ಕಿ.ಮೀ.ನ 4 ಸುತ್ತುಗಳ ಸೈಕಲ್ ಓಟದ ಸ್ಪರ್ಧೆಯಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಕು.ಪವಿತ್ರಾ ಕುರ್ತಕೋಟಿ (41ನಿ.4ಸೆ) ನಲ್ಲಿ ಗುರಿ ಮುಟ್ಟುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾಳೆ.
ಇಂದು 14 ಮತ್ತು 16 ವರ್ಷದ ಬಾಲಕ ಮತ್ತು ಬಾಲಕಿಯರಿಗಾಗಿ ವೈಯಕ್ತಿಕ ಟಾಯ್ ಟ್ರಾಯಲ್‌ನ 10 ಕಿಮೀ 4 ಸುತ್ತುಗಳ ಸೈಕಲ್ ಓಟದ ಸ್ಪರ್ಧೆ ನಡೆಯಿತು. ಅದರಂತೆ ೧೮ ವರ್ಷದ ಬಾಲಕರಿಗಾಗಿ ವೈಯಕ್ತಿಕ ಟಾಯ್ ಟ್ರಾಯಲ್‌ನ 18.4 ಕಿಮೀ 4 ಸುತ್ತುಗಳ ಸೈಕಲ್ ಓಟದ ಸ್ಪರ್ಧೆ ಜರುಗಿತು.
14 ವರ್ಷದವರ ವಿಭಾಗ: ಮಹಾರಾಷ್ಟ್ರದ ಅದೀಪ ವಘಾ(ಪ್ರಥಮ), ಕರ್ನಾಟಕದ ಸಮರಪನ ಜೈನ್(ದ್ವಿತೀಯ), ಅಸ್ಸಾಂನ ಮಲವ ದತ್ತಾ(ತೃತೀಯ), ಬಾಲಕಿಯರ ವಿಭಾಗದಲ್ಲಿ ಮಹಾರಾಷ್ಟ್ರದ ಸಿದ್ಧಿ ಸಿರ್ಕೇ(ಪ್ರಥಮ), ಶರವನಿ ಪರಿತ್(ದ್ವಿತೀಯ), ಕರ್ನಾಟಕದ ಚಾಯಾ ನಾಗಶೇಟ್ಟಿ (ತೃತೀಯ) ಸ್ಥಾನ ಪಡೆದಿದ್ದಾರೆ.
16 ವರ್ಷದವರ ವಿಭಾಗ: ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ಕರಿನ್ ಮರ್ಶಲ್ (ಪ್ರಥಮ), ಕೇರಳದ ಅಗಸಾ ಅನ್ನ ಥೊಮಸ್(ದ್ವಿತೀಯ), ಕರ್ನಾಟಕದ ಪವಿತ್ರಾ ಕುರ್ತಕೋಟಿ (ತೃತೀಯ), ಬಾಲಕರ ವಿಭಾಗದಲ್ಲಿ ಕರ್ನಾಟಕದ ಚರತಗೌಡ (ಪ್ರಥಮ), ಕೇರಳದ ಅದ್ವೈತ್ ಸನ್ಕರ್ (ದ್ವಿತೀಯ), ಪಶ್ಚಿಮ ಬಂಗಾಳದ ಸುಧನಸು ಲಿಮಬು (ತೃತೀಯ) ಸ್ಥಾನ ಪಡೆದಿದ್ದಾರೆ.
18 ವರ್ಷದವರ ವಿಭಾಗ: ಬಾಲಕರ ವಿಭಾಗದಲ್ಲಿ ಕರ್ನಾಟಕದ ಅಡೋನಿಸ್ ತನಗ್ಪು (ಪ್ರಥಮ), ಹರ್ಶಿತ ಕೆ.ಜೆ.(ದ್ವಿತೀಯ) ಹಾಗೂ ಪ.ಬಂಗಾಳದ ರಾಜಕುಮಾರ ರಾಯ್ (ತೃತೀಯ) ಸ್ಥಾನ ಪಡೆದಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post