ನವದೆಹಲಿ: ಕಳೆದ 8 ತಿಂಗಳಿನಿಂದ ಪೂರ್ವ ಲಡಾಖ್ನಲ್ಲಿ ಉಂಟಾಗಿದ್ದ ಉದ್ವಿಗ್ನತೆ 2021ರ ಫೆಬ್ರವರಿಯಲ್ಲಿ ಬಗೆಹರಿದಿದೆ. ಒಪ್ಪಂದಗಳ ಪ್ರಕಾರ ಎರಡೂ ಸೇನೆಗಳು ಪೂರ್ವ ಲಡಾಖ್ ಭಾಗದಿಂದ ಹಿಂದೆ ಸರಿದಿವೆ.
2020 ಜೂನ್ 15 ರಂದು ನಡೆದ ಗಲ್ವಾನ್ ಸಂಘರ್ಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದಾರೆ. ಇನ್ನು ಇದೇ ಸಂಘರ್ಷದಲ್ಲಿ ಚೀನಾದ 45 ಸೈನಿಕರು ಸಾವನ್ನಪ್ಪಿದ್ದಾರೆ ಅಂತಾ ರಷ್ಯಾದ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. 45 ಚೀನಿ ಸೈನಿಕರು ಸಾವನ್ನಪ್ಪಿದ್ದಾರೆ ಅಂತಾ ಜಗತ್ತಿಗೆ ಗೊತ್ತಾಯಿತೋ, ಆಗಲೇ ಎಚ್ಚೆತ್ತ ಚೀನಾ.. ಈ ಸುದ್ದಿಗೆ ತೇಪೆ ಹಚ್ಚಲು ಮುಂದಾಗಿ ನಿನ್ನೆ ಎರಡು ವಿಡಿಯೋಗಳನ್ನ ಬಿಡುಗಡೆ ಮಾಡಿತ್ತು. ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ವಿಡಿಯೋದಲ್ಲಿ ಭಾರತ ಹಾಗೂ ಚೀನಾದ ಯೋಧರು ಯಾರು ಅನ್ನೋದು ಗೊಂದಲು ಸೃಷ್ಟಿಯಾಗಿತ್ತು.
ಲೆಟೆಸ್ಟ್ ವಿಷಯ ಏನಂದರೆ ಚೀನಿ ಸೇನೆ ವಿಡಿಯೋ ಬಿಡುಗಡೆ ಮಾಡಿದ ಬೆನ್ನಲ್ಲೇ ಭಾರತೀಯ ಯೋಧನೊಬ್ಬ ಚೀನಾ ಸೇನೆಗೆ ಎದೆಯುಬ್ಬಿಸಿ ನಿಂತು ಹೋರಾಡಿದ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚೀನಿ ಸೈನಿಕರ ಎದುರು ನಿಂತ ಫೋಟೋದಲ್ಲಿರುವ ನಮ್ಮ ಯೋಧನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಅಂದ್ಹಾಗೆ ಯೋಧನ ಸಾಹಸಗಾಥೆಯನ್ನ ಕೊಂಡಾಡುತ್ತಿರುವ ಯೋಧನ ಹೆಸರು ಕ್ಯಾಪ್ಟನ್ ಸೊಯಿಬಾ ಮನಿಂಗ್ಬಾ ರಂಗನಮೇಯಿ. ಮೂಲತಃ ಮಣಿಪುರದವರು, 2018 ರಲ್ಲಿ ಸೇನೆಗೆ ಸೇರಿದ್ದಾರೆ ಅಂತಾ ವರದಿಯಾಗಿದೆ. ಇನ್ನು ಇಂದು ಈ ವೀರ ಯೋಧನನ್ನ ಮಣಿಪುರದ ಸಿಎಂ ಬಿರೆನ್ ಸಿಂಗ್ ಭೇಟಿಯಾಗಿ ಅಭಿನಂದಿಸಿದ್ದಾರೆ. ಈ ಬಗ್ಗೆ ಸಿಎಂ ಬಿರೆನ್ ಸಿಂಗ್ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸೇನಾಪತಿ ಜಿಲ್ಲೆಯ ಕ್ಯಾಪ್ಟನ್ ಸೊಯಿಬಾ ಅವರನ್ನು ಭೇಟಿ ಮಾಡಿದೆ. 16 ನೇ ಬಿಹಾರ ರೆಜಿಮೆಂಟ್‌ನ ಕ್ಯಾಪ್ಟನ್ ಸೊಯಿಬಾ ಅವರು ಚೀನಿಯರೊಂದಿಗಿನ ಸಂಘರ್ಷದಲ್ಲಿ ತಮ್ಮ ತಂಡವನ್ನು ಮುನ್ನಡೆಸಿದರು. ರಾಷ್ಟ್ರಕ್ಕಾಗಿ ಕೆಚ್ಚೆದೆಯಲ್ಲಿ ತೋರಿಸಿರುವ ಶೌರ್ಯ ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ ಅಂತಾ ಬರೆದುಕೊಂಡಿದ್ದಾರೆ.
ಅದರಂತೆ ಇನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಸೇರಿದಂತೆ ಹಲವು ಇವರ ಶೌರ್ಯವನ್ನ ಕೊಂಡಾಡಿದ್ದಾರೆ. ವಿಶೇಷ ಅಂದ್ರೆ ಸೊಯಿಬಾ ಅವರಿಗೆ ಕೇವಲ 24 ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಚೀನಿಯರ ವಿರುದ್ಧ ಹೋರಾಡಿ 45 ಪಿಎಲ್ಎ ಸೈನಿಕರಿಗೆ ಮಣ್ಣುಮುಕ್ಕಿಸಿದ ವೀರ ಯೋಧನನ್ನ ದೇಶಾದ್ಯಂತ ಕೊಂಡಾಡಲಾಗುತ್ತಿದೆ.
Meet Capt. Soiba Maningba Rangnamei from Senapati District, Manipur of 16 Bihar, leading his men in Galwan during the confrontation against the Chinese PLA. The valour you have shown while standing up for the Nation has made all of us proud. pic.twitter.com/YUuyGzWtaa
— N.Biren Singh (@NBirenSingh) February 20, 2021
https://www.facebook.com/KirenRijiju/posts/3773209712800771
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post