ಮಾಸ್ಕೋ: ಮನುಕುಲಕ್ಕೆ ಕಂಟಕವಾಗಿರೋ ಕೊರೊನಾ ಕಾಟದಿಂದ ಹೊರಬರುವ ಮುನ್ನವೇ ಮತ್ತೊಂದು ಭಯಾನಕ ವೈರಸ್ನ ಆತಂಕ ಜಗತ್ತನ್ನ ಕಾಡಲಾರಂಭಿಸಿದೆ. ಹಕ್ಕಿಜ್ವರದ ಹೊಸ ತಳಿಯ ಮಾನವ ಸೋಂಕಿನ ವಿಶ್ವದ ಮೊದಲ ಪ್ರಕರಣ ರಷ್ಯಾದಲ್ಲಿ ವರದಿಯಾಗಿದೆ. ಇದನ್ನ ಹಕ್ಕಿ ಜ್ವರದ H5N8 ವೈರಸ್ ಅಂತ ಗುರುತಿಸಲಾಗಿದೆ.
ಇದುವರೆಗೆ ಮಾನುಷ್ಯನಿಂದ ಮನುಷ್ಯನಿಗೆ ಸೋಂಕು ಹರಡಿರುವ ಯಾವುದೇ ಕುರುಹು ಕಂಡುಬಂದಿಲ್ಲ ಎಂದು ರಷ್ಯಾದ ಸಾರ್ವಜನಿಕ ಆರೋಗ್ಯ ಮುಖ್ಯಸ್ಥ ಅನ್ನಾ ಪೊಪೊವಾ ಹೇಳಿದ್ದಾರೆ. ಹಕ್ಕಿಯಿಂದ ಸೋಂಕು ಮಾನವನಿಗೆ ಹರಡಿರುವ ಮೊದಲ ಪ್ರಕರಣವಿದು ಎಂದು ವರದಿಯಾಗಿದೆ. ದಕ್ಷಿಣ ರಷ್ಯಾದ ಕೋಳಿ ಘಟಕದಲ್ಲಿ 7 ಕಾರ್ಮಿಕರಿಗೆ ಸೋಂಕು ಇರೋದು ದೃಢಪಟ್ಟಿದೆ. ಇದಲ್ಲದೆ ಹಕ್ಕಿಜ್ವರದ ಇನ್ನೂ 3 ತಳಿಗಳು- H5N1, H7N9 ಮತ್ತು H9N2 ಕೂಡ ಮಾನವರಿಗೆ ಹರಡುತ್ತೆ ಅಂತ ವಿಶ್ವ ಆರೋಗ್ಯ ಸಂಸ್ಥೆ(WHO) ಎಚ್ಚರಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post