ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಸಂಸತ್ನಲ್ಲಿ ಒಂದು ಸಣ್ಣ ವಿಚಾರಕ್ಕೆ ಬೆಚ್ಚಿಬಿದ್ದ ಘಟನೆ ನಡೆದಿದೆ. ಮಾರ್ಕೆಲ್ ಅವರು ಇಂದು ಸಂಸತ್ನಲ್ಲಿ ಭಾಷಣ ಮಾಡಿದರು. ಭಾಷಣದ ವೇಳೆ ಮಗ್ನರಾಗಿದ್ದ ಚಾನ್ಸಲರ್, ತಮ್ಮ ಮಾತು ಮುಗಿದ ಬಳಿಕ ಪೋಡಿಯಂನಲ್ಲಿ ಇಟ್ಟಿದ್ದ ಮಾಸ್ಕ್ ಮರೆತು ಬರುತ್ತಾರೆ.
ತಮ್ಮ ಆಸನದ ಮೇಲೆ ಕೂತ ಮಾರ್ಕೆಲ್ ಅವರಿಗೆ ಕೊನೆಗೆ ತಾವು ಮಾಸ್ಕ್ ಮರೆತು ಬಂದಿರೋದು ಗೊತ್ತಾಗುತ್ತದೆ. ಸಂದರ್ಭದಲ್ಲಿ ಏನೋ ದೊಡ್ಡ ಅನಾಹುತ ಸಂಭವಿಸಿತು ಅನ್ನೋ ರೀತಿಯಲ್ಲಿ ಗಾಬರಿಯಾದ ಅವರು, ಕೂಡಲೇ ಅಲ್ಲಿಗೆ ಧಾವಿಸಿ ಮಾಸ್ಕ್ ತೆಗೆದುಕೊಂಡು ಬಂದು ಕೂತಿದ್ದಾರೆ.
ಸದ್ಯ ಏಂಜಲಿಸ್ ಬಿಚ್ಚಿ ಬಿದ್ದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ತಮ್ಮದೇ ರೀತಿಯಲ್ಲಿ ಎಕ್ಸ್ಪ್ರೆಸನ್ ಮಾಡುತ್ತಿದ್ದಾರೆ. ಅಲ್ಲದೇ ಏಂಜೆಲಾ ಮಾರ್ಕೆಲ್ ಕಾಳಜಿಗೆ ಕೆಲವರು ಹ್ಯಾಟ್ಸ್ಆಫ್ ಹೇಳಿದ್ದಾರೆ.
Leadership by Example. Angela Merkel of Germany or "mama" like we jokingly nicknamed her back in my playing days, is definitely one of my favourite world leaders. many could learn from her!! https://t.co/rDJENjlqTI
— Sunday Oliseh (@SundayOOliseh) February 19, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post