ಕೊಲರಾಡೊ: 231 ಪ್ರಯಾಣಿಕರನ್ನು ಹೊತ್ತು ಹಾರಾಟ ನಡೆಸುತ್ತಿದ್ದ ಯುನೈಟೆಡ್ ಏರ್ಲೈನ್ಸ್ ವಿಮಾನದ ಇಂಜಿನ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ಅಮೆರಿಕಾದ ಡೆನ್ವರ್ನಲ್ಲಿ ನಡೆದಿದೆ. ಪರಿಣಾಮ ವಿಮಾನದ ಬಿಡಿಭಾಗಗಳು ವಸತಿ ಪ್ರದೇಶದ ಮೇಲೆ ಬಿದ್ದಿವೆ.
ಬೋಯಿಂಗ್ 777-200 ಯುಎ328 ಸಂಖ್ಯೆಯ ವಿಮಾನ ಡೆನ್ವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 12:15ಕ್ಕೆ ಹೊರಟ್ಟಿತ್ತು. ಹೊನೊಲುಲುಗೆ ತಲುಪುಬೇಕಿದ್ದ ವಿಮಾನ ಮಾರ್ಗ ಮಧ್ಯದಲ್ಲೇ ತಾಂತ್ರಿಕ ಸಮಸ್ಯೆ ಎದುರಿಸಿತ್ತು. ಈ ವೇಳೆ ವಿಮಾನದ ಎಡಭಾಗದ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ವಿಮಾನವನ್ನ ತುರ್ತು ಭೂಸ್ಪರ್ಶ ಮಾಡುವಲ್ಲಿ ಪೈಲಟ್ಗಳು ಯಶಸ್ವಿಯಾಗಿದ್ದಾರೆ. ಯಾವುದೇ ಪ್ರಯಾಣಿಕರಿಗೆ ಗಾಯವಾಗದೆ ಸುರಕ್ಷಿತವಾಗಿ ಬಂಜರು ಭೂಮಿಯೊಂದರ ಬಳಿ ಲ್ಯಾಂಡ್ ಆಗಿದ್ದಾರೆ.
ಎಫ್‌ಎಎ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಘಟನೆ ಬಗ್ಗೆ ತನಿಖೆ ನಡೆಸುತ್ತಿದೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಗಾಯವಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಘಟನೆ ಕುರಿತು ಅನುಭವ ಹಂಚಿಕೊಂಡಿರುವ ಪ್ರಯಾಣಿಕರೊಬ್ಬರು, ವಿಮಾನ ಟೇಕ್ಆಫ್ ಆದ ಕೆಲ ಕ್ಷಣಗಳಲ್ಲೇ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಒಂದು ಹಂತದಲ್ಲಿ ನಾವು ಸಾಯುತ್ತೇವೆ ಎಂದು ಭಾವಿಸಿದ್ದೆ. ವಿಮಾನ ಎತ್ತರದಿಂದ ಕುಸಿಯತೊಡಗಿತ್ತು ಎಂದು ಹೇಳಿದ್ದಾರೆ.
ಡೆನ್ವರ್ ಉಪನಗರವಾದ ಬ್ರೂಮ್‌ಫೀಲ್ಡ್ ನಿವಾಸಿಗಳು ತಮ್ಮ ಮನೆಗಳ ಸುತ್ತಲೂ ಬಿದ್ದಿರುವ ವಿಮಾನದ ಅವಶೇಷಗಳನ್ನ ಕಂಡು ಅಚ್ಚರಿಗೊಂಡಿದ್ದಾರೆ. ವಿಮಾನದ ದೈತ್ಯ ರಿಂಗ್ ಆಕಾರದ ಲೋಹದ ತುಂಡು ಕಿರ್ಬಿ ಕ್ಲೆಮೆಂಟ್ಸ್‌ನ ಅಂಗಳದಲ್ಲಿ ಬಿದ್ದಿದೆ.
Another photo of debris from a home off Elmwood in @broomfield. pic.twitter.com/VXEHEMpeDD
— Broomfield Police (@BroomfieldPD) February 20, 2021
This photo was taken near 13th and Elmwood. Media stage in Commons Park on North side near dog park. PIO eta is 30 mins. pic.twitter.com/vfXlToB5mE
— Broomfield Police (@BroomfieldPD) February 20, 2021
Flight UA328 from Denver to Honolulu experienced an engine failure shortly after departure, returned safely to Denver and was met by emergency crews as a precaution. There are no reported injuries onboard. We are in contact with the FAA, NTSB and local law enforcement.
— United Airlines (@united) February 20, 2021
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post