ಬೆಂಗಳೂರು: ಬೆಳ್ಳಂದೂರಿನ ಎಸ್‌ಜೆಆರ್ ವಾಟರ್ ಮಾರ್ಕ್ ಅಪಾರ್ಟ್ಮೆಂಟ್ ಫೆಬ್ರವರಿ 15 ನೇ ತಾರೀಖಿನಿಂದ ಇಲ್ಲಿವರೆಗೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿವೆ.
ಈ ಅಪಾರ್ಟ್ಮೆಂಟ್ನ ಒಟ್ಟು 9 ಬ್ಲಾಕ್ಗಳಲ್ಲಿ 1,500ಕ್ಕೂ ಹೆಚ್ಚು ಮಂದಿ ವಾಸವಿದ್ದಾರೆ. 9 ಬ್ಲಾಕ್ಗಳ ಪೈಕಿ 6 ಬ್ಲಾಕ್ಗಳಲ್ಲಿ ಕೊರೊನಾ ಪಾಸಿಟಿವ್ ಕೇಸ್ಗಳು ಕಂಡುಬಂದಿವೆ. ಈ ಹಿನ್ನಲೆ ಇಂದು ಮಹದೇವಪುರದಲ್ಲಿ ಬಿಬಿಎಂಪಿ ವತಿಯಿಂದ RTPCR ಟೆಸ್ಟ್ಗಳನ್ನ ನಡೆಸಲಾಗಿದೆ. 9 ಮೊಬೈಲ್ ಟೀಂಗಳಿಂದ 500 ಜನರ ಆರ್ಟಿಪಿಸಿಆರ್ ಟೆಸ್ಟ್ ನಡೆಸಲಾಗಿದ್ದು ಇದರ ರಿಸಲ್ಟ್ ನಾಳೆ ಬರಲಿದೆ.
6 ಬ್ಲಾಕ್ಗಳಲ್ಲಿ ಕೊರೊನಾ ಕೇಸ್ಗಳು ಕಂಡುಬಂದ ಹಿನ್ನೆಲೆ ಅಪಾರ್ಟ್ಮೆಂಟ್ನ್ನು ಕಂಟೈನ್ಮೆಂಟ್ ಜೋನ್ ಎಂದು ಬಿಬಿಎಂಪಿ ಘೋಷಿಸಿದೆ. ಅಪಾರ್ಟ್ಮೆಂಟ್ ಸುತ್ತಮುತ್ತ ಸ್ಯಾನಿಟೈಸ್ ಮಾಡಲು ಪಾಲಿಕೆ ಮುಂದಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post