ನಾಗ್ಪುರ್: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳಲಾಗ್ತಿದೆ. ಈಗಾಗಲೇ ಪುಣೆ ಹಾಗೂ ಅಮರಾವತಿಯಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಇತ್ತ ನಾಗ್ಪುರ್ ಜಿಲ್ಲೆಯಲ್ಲಿ ಮಾರ್ಚ್ 7ರವರೆಗೆ ಶಾಲಾ -ಕಾಲೇಜುಗಳು ಹಾಗೂ ಕೋಚಿಂಗ್ ಕ್ಲಾಸ್ಗಳನ್ನ ಬಂದ್ ಮಾಡಲು ನಿರ್ಧರಿಸಲಾಗಿದೆ.
ಇಂದು ಈ ಕುರಿತು ಮಾಹಿತಿ ನೀಡಿದ ನಾಗ್ಪುರ್ ಜಿಲ್ಲಾ ಉಸ್ತುವಾರಿ ಸಚಿವ ನಿತಿನ್ ರಾವತ್, ಮಾರ್ಚ್ 7ರವರೆಗೆ ಶಾಲಾ -ಕಾಲೇಜುಗಳು ಹಾಗೂ ಕೋಚಿಂಗ್ ಕ್ಲಾಸ್ಗಳನ್ನ ಬಂದ್ ಮಾಡಲಾಗುತ್ತದೆ. ಹಾಗೇ ವಾರಾಂತ್ಯದಲ್ಲಿ ಪ್ರಮುಖ ಮಾರ್ಕೆಟ್ಗಳು ಕ್ಲೋಸ್ ಆಗಿರಲಿವೆ. ಹೋಟೆಲ್ ಹಾಗೂ ರೆಸ್ಟೊರೆಂಟ್ಗಳು ಶೇ 50ರ ಸಾಮರ್ಥ್ಯದಷ್ಟು ಮಾತ್ರ ಕಾರ್ಯನಿರ್ವಹಿಸಬೇಕು ಎಂದರು. ಇನ್ನು ಮದುವೆ ಮಂಟಪಗಳು ಫೆಬ್ರವರಿ 25ರಿಂದ ಮಾರ್ಚ್ 7ರವರೆಗೆ ಬಂದ್ ಆಗಿರಲಿವೆ ಎಂದು ಅವರು ತಿಳಿಸಿದ್ರು.
ಕೊರೊನಾ ಹೆಚ್ಚಳವಾಗ್ತಿರುವ ಹಿನ್ನೆಲೆ ರಾವತ್ ತಮ್ಮ ಮಗನ ಮದುವೆ ಆರತಕ್ಷತೆಯನ್ನ ಕ್ಯಾನ್ಸಲ್ ಮಾಡಿರೋದಾಗಿ ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post