ತುಮಕೂರು: ರಾಮ ಮಂದಿರಕ್ಕೆ ದೇಣಿಗೆ ಕೊಡಲು ಆಗದೇ ಇದ್ದರೆ ತೆಪ್ಪಗಿರಿ ಅಂದಿದ್ದ ಪ್ರಹ್ಲಾದ್ ಜೋಶಿ ಹೇಳಿಕೆ ವಿಚಾರವಾಗಿ ತುರುವೇಕೆರೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ನಾನು ದೇಣಿಗೆ ಕೊಡಲು ಆಗಲ್ಲ ಅಂದಿಲ್ಲ.. ಪದೇ ಪದೇ ಅವರು ನನಗೆ ಕೆಣಕಬಾರದು ಎಂದಿದ್ದಾರೆ.
ನಾನು ಟೀಕೆ ಮಾಡಿರೋದು ಸ್ವೇಚ್ಛಾಚಾರವಾಗಿ ಬೀದಿ ಬೀದಿಯಲ್ಲಿ ದೇಣಿಗೆ ಸಂಗ್ರಹ ಮಾಡಿರೋರ ಬಗ್ಗೆ. ಹಣ ವಸೂಲಿ ಮಾಡಲು ಯಾರು ಪವರ್ ಕೊಟ್ಟಿರೋರು..? ಪ್ರಲ್ಹಾದ್ ಜೋಶಿ ಎಷ್ಟು ದೇವಸ್ಥಾನ ಕಟ್ಟಿದ್ದಾರೆ..? ನಾನು ಮತ್ತು ದೇವೇಗೌಡರು ನಮ್ಮ ಭಾಗದಲ್ಲಿ ಎಷ್ಟೋ ದೇವಸ್ಥಾನ ಕಟ್ಟಲು ದೇಣಿಗೆ ಕೊಟ್ಟಿದ್ದೀವಿ.
ರಾಮನ ಹೆಸರು ದುರ್ಬಳಕೆ ಮಾಡಬೇಡಿ ಎಂದಿದ್ದೆ. ನಾನು ಲೆಕ್ಕ ಕೇಳಿಲ್ಲ, ಲೆಕ್ಕ ಕೇಳಿದವರಿಗೆ ಬೇಕಾದರೆ ಇವರು ಪ್ರಶ್ನೆ ಮಾಡಲಿ. ಹಣ ಸಂಗ್ರಕ್ಕೆ ನೀತಿ ನಿಯಮ ಇರಬೇಕು. ಪೆಟ್ರೋಲ್ ದರ ಶತಕ ಬಾರಿಸಲಿದೆ. ಇದು ನರೇಂದ್ರ ಮೋದಿ ಸಾಧನೆ. ಹಲವಾರು ಮಿತ್ರಪಕ್ಷಗಳು ಎನ್ ಡಿ ಎ ಕೂಟ ತೊರೆದಿವೆ. ಐಟಿ ಇಡಿ ಗಳು ಮಾತ್ರ ಇವರ ಮಿತ್ರ ಪಕ್ಷದಂತೆ ಇವೆ. ನಾನು ಸಿಎಂ ಆದಾಗ ನಮಗೆ ಸಂಬಂಧಿಸಿದವರ ಮನೆ ಮೇಲೆ ಪದೇ ಪದೇ ಐಟಿ ದಾಳಿ ನಡೆಸಿದರು ಈಗ ಯಾಕೆ ದಾಳಿ ನಡೆಯುತ್ತಿಲ್ಲ..? ಈ ಸರ್ಕಾರದಲ್ಲಿ ಲೂಟಿ ನಡೀತಿದೆ ಎಂದು ಸ್ವತಃ ವಿಶ್ವನಾಥ್ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಪಾರದರ್ಶಕ ಆಡಳಿತ ನಡೀತಿಲ್ಲ. ಐಟಿ ದಾಳಿಗೆ ನಾನು ಹೆದರಲ್ಲ.. ರಾಜ್ಯದಲ್ಲಿ ನಡೆಯುತ್ತಿರುವ ಅವ್ಯವಹಾರ ಕಂಡು ಅಸಹ್ಯ ಪಟ್ಟು ನಾನು ಮೌನಕ್ಕೆ ಶರಣಾಗಿದ್ದೇನೆ.. ಈ ವ್ಯವಸ್ಥೆ ಕಂಡು ಜನಗಳೇ ತಿರುಗಿ ಬೀಳಬೇಕು ಎಂದು ಕಿಡಿಕಾರಿದ್ದಾರೆ.
ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಹೆಚ್ಡಿಕೆ.. ಸಮಾಜದಲ್ಲಿ ಸಂಘರ್ಷ ಉಂಟಾಗುವ ಮೊದಲು ಸರ್ಕಾರ ಸರಿಯಾದ ಮಾಹಿತಿ ಕೊಡಬೇಕು. ಇಲ್ಲದಿದ್ದರೆ ಅನಾಹುತ ನಡೆಯಬಹುದು. ಜಾತಿಗಣತಿ ವರದಿ ಬರೆದಿರೋದು ಕಾಂತರಾಜು ಅಲ್ಲ. ಸಿದ್ದರಾಮಯ್ಯನವರೇ ಬರೆದಿರೋದು.. ಅದಕ್ಕೆ ಆರ್ಥಿಕ ಸಾಮಾಜಿಕ ಗಣತಿ ಎಂಬ ಹೆಸರು ಕೊಟ್ಟಿದ್ದಾರೆ. ಅದಕೆ ಬಹಳ ಜನರಿಗೆ ಗಾಬರಿ ಇದೆ. ಸಿದ್ದರಾಮಯ್ಯರ ಆ ವರದಿ ರಿಲೀಸ್ ಮಾಡಿದರೆ ಸಂಘರ್ಷ ಉಂಟಾಗಬಹುದು ಎಂದು ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post