ಐಪಿಎಲ್ನಲ್ಲಿ ಪಾಲ್ಗೊಳ್ಳುವ ಆಸ್ಟ್ರೇಲಿಯಾ ಆಟಗಾರರರು ಕೆಲ ಬ್ರ್ಯಾಂಡ್‌ಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಬಂಧ ಹೇರಿದೆ. ಆಸ್ಟ್ರೇಲಿಯಾ ಆಟಗಾರರು ಐಪಿಎಲ್ ವೇಳೆ ಬೆಟ್ಟಿಂಗ್, ಫಾಸ್ಟ್ ಫುಡ್, ಮದ್ಯಪಾನ, ತಂಬಾಕಿನ ಉತ್ಪನ್ನಗಳ ಬ್ರ್ಯಾಂಡ್‌ಗಳ ಪ್ರಚಾರದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಸೂಚಿಸಿ ಆದೇಶ ಹೊರಡಿಸಿದೆ.. ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಒಬ್ಬ ಆಟಗಾರ, ಆಸ್ಟ್ರೇಲಿಯಾ ರಾಜ್ಯದ ಒಬ್ಬ ಆಟಗಾರ ಇಲ್ಲವೆ ಬಿಗ್ ಬ್ಯಾಷ್ ಲೀಗ್‌ನ ಒಬ್ಬ ಆಟಗಾರನನ್ನಷ್ಟೇ ಜಾಹೀರಾತಿನಲ್ಲಿ ಬಳಸಬಹುದಾಗಿದೆ. ಒಬ್ಬನಿಗಿಂತ ಹೆಚ್ಚು ಮಂದಿಯನ್ನು ಜಾಹೀರಾತಿನಲ್ಲಿ ಬಳಸಿಕೊಳ್ಳುವಂತೆ ಇಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸೂಚಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post