ಬೆಳಗಾವಿ: ನಮಗೆ ಬೆಳಗಾವಿ ಕುಂದಾ ಬೇಡ ಗೋಕಾಕ್ ಕರದಂಟು ಬೇಕು ಅಂತ ನಮ್ಮ ಸಮುದಾಯದ ಯುವಕರು ಹಾಗೂ ಮುಖಂಡರು ಕೇಳಿದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಪಂಚಮಸಾಲಿ ಮೀಸಲಾತಿ ಹೋರಾಟ ಕಾಂಗ್ರೆಸ್ ಪಕ್ಷದ ಹೋರಾಟದಂತಿತ್ತು ಎಂಬ ಮುರುಗೇಶ್ ನಿರಾಣಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್, ಸಮುದಾಯವನ್ನು 2ಎಗೆ ಸೇರಿಸಿದರೆ ಬೆಳಗಾವಿ ಕುಂದಾ ತರುತ್ತೇನೆ ಎಂದು ಭಾಷಣದ ಸಂದರ್ಭದಲ್ಲಿ ಹೇಳಿದ್ದೆ. ಆದರೆ ಅವರು ಕುಂದಾ ಬೇಡ ಗೋಕಾಕ್ ಕರದಂಟು ಬೇಕು ಎಂದಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ನನ್ನ ಶ್ರೀರಕ್ಷೆ. ಜನರ ಬಹಳಷ್ಟು ತಿಳುವಳಿಕೆ ಹೊಂದಿದ್ದಾರೆ. 50 ವರ್ಷಗಳಿಂದ ಆಗದ ಅಭಿವೃದ್ಧಿ ಕ್ಷೇತ್ರದಲ್ಲಿ ಆಗಿದೆ. ಮುಂದಿನ ಟಾರ್ಗೆಟ್ ಏನಿದ್ರು ಗೋಕಾಕ್ ಅಂತ ಹೇಳಿದ್ದೀನಿ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶೀಘ್ರದಲ್ಲೇ ವಿನೂತನವಾಗಿ ಸಮಾವೇಶ ನಡೆಸಿ ಸತ್ಕಾರ ಮಾಡುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕಾಂಗ್ರೆಸ್ ಬಿ ಟೀಮ್ ಎಂಬ ನಿರಾಣಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಹೆಬ್ಬಾಳ್ಕರ್ ಯತ್ನಾಳ್ ಪರ ಬ್ಯಾಟಿಂಗ್ ಮಾಡಿದ್ರು. ಇದು ಸತ್ಯಕ್ಕೆ ದೂರವಾದ ಸಂಗತಿ. ನಿರಾಣಿ ಅಣ್ಣ ಅವರು ಅಧಿಕಾರದಲ್ಲಿದ್ದು ಸಿಎಂ ಅವರ ಒತ್ತಡದಿಂದ ಈ ರೀತಿ ಮಾತನಾಡಿದ್ದಾರೆ ಎಂದರು. ಅವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಕಳೆದ 27 ವರ್ಷದಿಂದ ನಡೆದುಕೊಂಡು ಬಂದ ಹೋರಾಟ ಯಶಸ್ವಿಯಾಗುವ ಹಂತಕ್ಕೆ ಬಂದಿದ್ದು, ಸಮಾಜದ ಮಕ್ಕಳಾಗಿ ಸಮುದಾಯಕ್ಕೆ ಒಳ್ಳೆಯದು ಮಾಡಿ. ಶ್ರೀಗಳ ಉಪವಾಸ ಆಗದಂತೆ ನೋಡಿಕೊಂಡು, ರಾಜ್ಯದಲ್ಲಿ ಪಂಚಮಸಾಲಿ ಸಮುದಾಯ 2ಎ ಮತ್ತು ಕೇಂದ್ರದಲ್ಲಿ ಹಿಂದುಳಿದ ವರ್ಗಗಳಿಗೆ ಸೇರ್ಪಡೆ ಮಾಡಲು ಪ್ರಯತ್ನಿಸಿ ಎಂದು ಸಚಿವ ಮುರುಗೇಶ್ ನಿರಾಣಿ ಹಾಗೂ ಸಿಸಿ ಪಾಟೀಲ್ ಅವರಿಗೆ ಮನವಿ ಮಾಡಿದ್ರು.
ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ಘೋಷಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯಾರು ಲಾಯಕ್ ಇದ್ದಾರೋ ಇಲ್ಲವೋ ನಿರಾಣಿ ಹೇಳಿಕೆ ಸತ್ಯ ಆಗಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತಗೊಂಡು ಜೊತೆಗೆ ಚರ್ಚೆ ಮಾಡಬೇಕು ಅಂತ ಹೇಳಿದ್ರು. ಸಮಾವೇಶದಲ್ಲಿ ಮೂಲೆ ಮೂಲೆಯಿಂದ ಜನ ಬಂದಿದ್ದರು. ಸಮಾವೇಶ ಪ್ರಕಟ ಮಾಡಿದ್ದರಿಂದ ಸ್ವಲ್ಪ ಹೆಚ್ಚು ಕಮ್ಮಿ ಆಗಿದೆ. ಒಬ್ಬ ವ್ಯಕ್ತಿಯನ್ನು ತೇಜೋವಧೆ ಮಾಡುವುದು ಸರಿಯಲ್ಲ. ಸಮಾಜ ಸಂಘಟನೆಯನ್ನು ರಾಜಕೀಯ ಮೆಟ್ಟಿಲು ಮಾಡಬಾದರು. ಕೇವಲ ಸಮಾಜದ ಒಳಿತಿಗಾಗಿ ಈ ಹೋರಾಟ ಮೀಸಲು ಇಡಬೇಕು ಎಂದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post