ಮಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಏಳುವ ಭೀತಿ ಹಿನ್ನೆಲೆ ಕೇರಳದಿಂದ ರಾಜ್ಯಕ್ಕೆ ಆಗಮಿಸುವವರಿಗೆ ಕೊರೊನಾ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಆದ್ರೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ನಿಯಮದಿಂದ ಕೆಲವರಿಗೆ ಮೂರು ದಿನ ವಿನಾಯತಿ ನೀಡಿದೆ.
ನಿತ್ಯ ಕೇರಳದಿಂದ ಮಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ಕಡ್ಡಾಯ ಕೊರೊನಾ ವರದಿ ತರುವುದರಿಂದ ವಿನಾಯಿತಿ ನೀಡಿದೆ. ಮೂರು ದಿನಗಳ ಬಳಿಕ ಕಡ್ಡಾಯವಾಗಿ ಜಿಲ್ಲೆ ಪ್ರವೇಶ ಮಾಡುವವರು ಆರ್ಟಿಪಿಸಿಆರ್ ವರದಿ ತರುವುದು ಕಡ್ಡಾಯ ಮಾಡಲಾಗಿದೆ.
ಇನ್ನು ವಿದ್ಯಾರ್ಥಿಗಳಿಗೆ ಮಂಗಳೂರಿನ ಶಿಕ್ಷಣ ಸಂಸ್ಥೆಗಳಲ್ಲೇ ಕೊರೊನಾ ಟೆಸ್ಟ್ ಮಾಡಿಸಲಾಗುತ್ತದೆ. ಉದ್ಯೋಗಿಗಳು ಮೂರು ದಿನಗಳ ಬಳಿಕ ನೆಗೆಟಿವ್ ರಿಪೋರ್ಟ್ ಸಲ್ಲಿಸಬೇಕು. ಉಳಿದಂತೆ ಇತರೆ ಪ್ರಯಾಣಿಕರಿಗೆ ಯಾವುದೇ ವಿನಾಯಿತಿ ಇಲ್ಲ. ನಿತ್ಯ ಪ್ರಯಾಣಿಸುವವರು ಮಂಗಳೂರಿನ ಸಂಸ್ಥೆಗಳ ಐಡಿ ಕಾರ್ಡ್ ತೋರಿಸಿ ಪ್ರಯಾಣಿಸಲು ಅವಕಾಶವಿದೆ. ಮಂಗಳೂರು ಗಡಿಭಾಗ ತಲಪಾಡಿಯ ಚೆಕ್ ಪೋಸ್ಟ್ ನಲ್ಲಿ ಇಂದು ಕೂಡ ತಪಾಸಣೆ ಮುಂದುವರಿದಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post