ಆಸ್ಟ್ರೇಲಿಯಾ ವಿರುದ್ಧ 59 ಎಸೆತಗಳಲ್ಲಿ 99 ರನ್ಗಳಿಸಿ ಕಿವೀಸ್ಗೆ ಗೆಲುವು ತಂದುಕೊಟ್ಟಿದ್ದ ಡೆವನ್ ಕಾನ್ವೆಗೆ ಜಸ್ಟ್ 4ಡೇ ಲೇಟ್ ಎಂದು ಆರ್.ಅಶ್ವಿನ್ ಟ್ವೀಟ್ ಮಾಡಿದ್ದಾರೆ. ನಿನ್ನೆ ನಡೆದ ಮೊದಲ ಟಿ20ಯಲ್ಲಿ ಆರಂಭದಲ್ಲೇ ನ್ಯೂಜಿಲೆಂಡ್ಗೆ ಆಸೀಸ್ ಆಘಾತ ನೀಡಿತ್ತು. ಆದ್ರೆ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಕಾನ್ವೆ ವಿಕೆಟ್ ಕಾಪಾಡಿದ್ದಲ್ಲದೆ, ತಂಡದ ಮೊತ್ತವನ್ನು ಏರಿಸಲು ಸಹಾಯ ಮಾಡಿದ್ರು. ಆದ್ರೆ, ಆಸೀಸ್ ತನ್ನೆಲ್ಲಾ ವಿಕೆಟ್ಗಳನ್ನ ಕಳ್ಕೊಂಡು ಕಿವೀಸ್ ಮುಂದೆ ಮಂಡಿಯೂರಿತು. ಇದರ ಬೆನ್ನಲ್ಲೆ ಟ್ವೀಟ್ ಮಾಡಿದ ಟೀಮ್ ಇಂಡಿಯಾ ಕ್ರಿಕೆಟಿಗ ಅಶ್ವಿನ್, ಡೆವನ್ ಕಾನ್ವೆ ಜಸ್ಟ್ 4ಡೇಸ್ ಲೇಟ್.. ಆದರೆ, ಇದೊಂದು ಅದ್ಭುತ ಇನ್ನಿಂಗ್ಸ್ ಎಂದಿದ್ದಾರೆ. ಐಪಿಎಲ್ ಮಿನಿ ಹರಾಜಿನಲ್ಲಿ ಕಾನ್ವೆ ಅನ್ಸೋಲ್ಡ್ ಆಗಿದ್ರು. ಈ ಇನ್ನಿಂಗ್ಸ್ ಹರಾಜಿಗೂ ಮುನ್ನ ಆಡಿದ್ರೆ, ಯಾವುದಾದ್ರೊಂದು ಫ್ರಾಂಚೈಸಿ ಪಾಲಾಗುತಿದ್ರಿ ಎಂಬುದು ಅಶ್ವಿನ್ ಮಾಡಿರುವ ಟ್ವೀಟ್ ಅರ್ಥವಾಗಿತ್ತು. ಹರಾಜಿನಲ್ಲಿ ಕಾನ್ವೆಯ ಮೂಲ ಬೆಲೆ 50 ಲಕ್ಷ ಇತ್ತು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post