ನವದೆಹಲಿ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಶ್ರೀಲಂಕಾ ಪ್ರವಾಸದ ಹಿನ್ನೆಲೆಯಲ್ಲಿ ಭಾರತದ ವಾಯು ಮಾರ್ಗ ಬಳಸಲು ಭಾರತ ಅನುಮತಿ ನೀಡಿದೆ.
ಇಮ್ರಾನ್ ಖಾನ್ ಇಂದಿನಿಂದ ಎರಡು ದಿನಗಳ ಕಾಲ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಕ್ಯಾಬಿನೇಟ್ ಸಚಿವರು ಇಮ್ರಾನ್ ಖಾನ್ಗೆ ಸಾಥ್ ನೀಡಲಿದ್ದಾರೆ. ಶ್ರೀಲಂಕಾ ಪ್ರಾವಸದ ವೇಳೆ ಎರಡು ದೇಶಗಳು ಆರೋಗ್ಯ, ಶಿಕ್ಷಣ, ವ್ಯವಹಾರ, ತಂತ್ರಜ್ಞಾನ, ರಕ್ಷಣೆ ಮತ್ತು ಪ್ರವಸೋದ್ಯಮ ವಿಚಾರದಲ್ಲಿ ಒಪ್ಪಂದಗಳನ್ನು ಮಾಡಿಕೊಳ್ಳಲಿವೆ.
2019ರಲ್ಲಿ ಪಾಕಿಸ್ತಾನ, ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಮತ್ತು ಸೌದಿ ಅರೇಬಿಯಾಗೆ ತೆರಳಲು ಪಾಕಿಸ್ತಾನದ ವಾಯುಮಾರ್ಗ ಬಳಕೆಗೆ ನಿರಾಕರಿಸಿತ್ತು. ಸಾಮಾನ್ಯ ಸಂದರ್ಭಗಳಲ್ಲಿ ವಿವಿಐಪಿ ವಿಮಾನಗಳಿಗೆ ದೇಶಗಳಿಂದ ಅನುಮತಿ ನೀಡಲಾಗುತ್ತದೆ. ಆದರೆ ಪಾಕಿಸ್ತಾನ ಅನುಮತಿ ನಿರಾಕರಿಸಿತ್ತು. ಈ ಹಿನ್ನೆಲೆ ಭಾರತ ವಿವಿಐಪಿ ಹಾರಾಟಕ್ಕೆ ಅನುಮತಿ ನಿರಾಕರಿಸಿದ್ದನ್ನ ಪ್ರಶ್ನಿಸಿ ಪಾಕಿಸ್ತಾನದ ವಿರುದ್ದ ಅಂತರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಮೊರೆಹೋಗಿತ್ತು.
ಅಂದ್ಹಾಗೆ ಇತ್ತೀಚೆಗಷ್ಟೇ ಶ್ರೀಲಂಕಾ ತನ್ನ ಪಾರ್ಲಿಮೆಂಟ್ನಲ್ಲಿ ಇಮ್ರಾನ್ ಖಾನ್ ಅವರ ಭಾಷಣವನ್ನು ರದ್ದುಪಡಿಸಿತ್ತು. ಭಾರತದೊಂದಿಗೆ ಅನಗತ್ಯವಾಗಿ ವಿರೋಧ ಕಟ್ಟಿಕೊಳ್ಳುವುದನ್ನು ತಪ್ಪಿಸುವ ಸಲುವಾಗಿ ಶ್ರೀಲಂಕಾ ಇಮ್ರಾನ್ ಭಾಷಣ ರದ್ದು ಮಾಡಿತ್ತು ಎನ್ನಲಾಗಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಇಡೀ ವಿಶ್ವಕ್ಕೆ ಲಸಿಕೆ ವಿತರಿಸಲು ಭಾರತ ಆಪತ್ಬಾಂಧವನಾಗಿದೆ. ಹೀಗಿರುವಾಗ ಚೀನಾದ ಸಾಲದ ಬಲೆಗೆ ಸಿಲುಕಿರುವ ಶ್ರೀಲಂಕಾ ಸರ್ಕಾರವು, ಭಾರತದೊಂದಿಗಿನ ತನ್ನ ಸಂಬಂಧವನ್ನ ಹಾಳುಮಾಡಿಕೊಳ್ಳದಿರಲು ಎಚ್ಚರಿಕೆ ವಹಿಸಿದೆ ಎಂದು ವರದಿಯಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post