ನಿನ್ನೆ ‘ತೋತಾಪುರಿ’ ಸಿನಿಮಾದ ಶೂಟಿಂಗ್ ವೇಳೆ, ಮೈಸೂರಿನಲ್ಲಿ ದರ್ಶನ್ ಅಭಿಮಾನಿಗಳು ನಟ ಜಗ್ಗೇಶ್ಗೆ ಮುತ್ತಿಗೆ ಹಾಕಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು. ಮೂರು ವಾರಗಳ ಹಿಂದೆ ನಡೆದ ದೂರವಾಣಿ ಸಂಭಾಷಣೆಯಲ್ಲಿ ದರ್ಶನ್ ಅಭಿಮಾನಿಗಳ ಬಗ್ಗೆ ಜಗ್ಗೇಶ್ ಅವಹೇಳನ ಮಾತನಾಡಿದ್ದರು. ಸದ್ಯ ಚಿತ್ರೀಕರಣದ ಸೆಟ್ಗೆ ಹೋಗಿ ಜಗ್ಗೇಶ್ರನ್ನ ಮುತ್ತಿಗೆ ಹಾಕಿ ಪ್ರಶ್ನಿಸಿದ್ದನ್ನ ಜಗ್ಗೇಶ್ ಹಾಗೂ ಡಾ.ರಾಜ್ಕುಮಾರ್ ಅಭಿಮಾನಿಗಳು ಖಂಡಿಸಿದ್ದಾರೆ.
ನಿನ್ನೆ ನಡೆದ ಘಟನೆ ಬಗ್ಗೆ ಫಿಲ್ಮ್ ಚೇಂಬರ್ಗೆ ಅಭಿಮಾನಿಗಳು ದೂರು ನೀಡಿದ್ದಾರೆ. ’40 ವರ್ಷಗಳಿಂದ ಜಗ್ಗೇಶ್ ಅವರು ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಹಿರಿಯ ನಟ ಜಗ್ಗೇಶ್ ಅವರ ಬಳಿ ನಿನ್ನೆ ದರ್ಶನ್ ಅಭಿಮಾನಿಗಳು ನಡೆದುಕೊಂಡ ರೀತಿ ಸರಿ ಅಲ್ಲ. ಒಂದು ವೇಳೆ ಅವರಿಗೆ ಅವಮಾನ ಆಗಿದ್ರೆ ಚೇಂಬರ್ ಗೆ ಬಂದು ದೂರು ನೀಡಬಹುದಿತ್ತು. ಅದರೆ ಏಕಾಏಕಿ ಶೂಟಿಂಗ್ ಸ್ಥಳಕ್ಕೆ ಹೋಗಿ ದಾಂಧಲೆ ಮಾಡಬಾರದಿತ್ತು. ಘಟನೆಗೆ ಸಂಬಂಧಿಸಿದಂತೆ ಸಂಬಂಧ ಪಟ್ಟವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಫಿಲ್ಮ್ ಚೇಂಬರ್ಗೆ ದೂರು ನೀಡಿದ್ದೇವೆ’ ಅಂದಿದ್ದಾರೆ ಜಗ್ಗೇಶ್ ಪರ ಅಭಿಮಾನಿಗಳು.
ಸದ್ಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಳಿ ಇರುವ ಅಣ್ಣಾವ್ರ ಪ್ರತಿಮೆ ಬಳಿ ಡಾ.ರಾಜ್ಕುಮಾರ್ ಹಾಗೂ ಜಗ್ಗೇಶ್ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಹಿರಿಯ ನಟ ಜಗ್ಗೇಶ್ರನ್ನ ಅವಮಾನಿಸಿದವರನ್ನ ಬಂಧಿಸುವಂತೆ ಆಗ್ರಹಹಿಸಿ ಪ್ರತಿಭಟನೆ ನಡೆಸಲಾಗ್ತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post