ಶ್ರೀನಗರ: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವಿರೋಧವಾಗಿ ಮೂರು ವರ್ಷಗಳ ಅವಧಿಗೆ ಪಿಡಿಪಿ(ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ) ಅಧ್ಯಕ್ಷರಾಗಿ ಮರು ಚುನಾಯಿತರಾಗಿದ್ದಾರೆ. ಮುಫ್ತಿ ಅವರ ಹೆಸರನ್ನು ಹಿರಿಯ ನಾಯಕರಾದ ಗುಲಾಮ್ ನಬಿ ಲೋನೆ ಹಂಜುರ ಮತ್ತು ಖುರ್ಷಿದ್ ಅಲಮ್ ಪ್ರಸ್ತಾಪಿಸಿದ್ದರು ಎಂದು ಪಾರ್ಟಿಯ ವಕ್ತಾರರು ತಿಳಿಸಿದ್ದಾರೆ.
ಹಿರಿಯ ಪಿಡಿಪಿ ನಾಯಕ ಅಬ್ದುಲ್ ರೆಹಮಾನ್ ವೀರಿ ಪಾರ್ಟಿ ಎಲೆಕ್ಷನ್ ಬೋರ್ಡ್ನ ಚೇರ್ಮನ್ ಆಗಿದ್ದರು. ಇನ್ನು ಹಿರಿಯ ನಾಯಕ ಸುರಿಂದರ್ ಚೌಧರಿ ಈ ಚುನಾವಣೆಯ ರಿಟರ್ನಿಂಗ್ ಆಫೀಸರ್ ಆಗಿದ್ದರು. ಚುನಾಯಿತರಾದ ನಂತರ ಹೇಳಿ ಕೆ ನೀಡಿರುವ ಮುಫ್ತಿ, ಜಮ್ಮು ಕಾಶ್ಮೀರ ಸಂಕಷ್ಟದ ಸಮಯವನ್ನು ಕಳೆದಿದೆ. ನಾನು ಪಿಡಿಪಿಯನ್ನು ಮುನ್ನಡೆಸಲಿದ್ದೇನೆ. ಪಿಡಿಸಿ ಸ್ಥಾಪನೆಯಾಗಿದ್ದು ಜನರ ಧ್ವನಿಯನ್ನ, ಸಮಸ್ಯೆಗಳನ್ನ ಎತ್ತಿ ತೋರಿಸಲು. ಆ ಕೆಲಸವನ್ನ ನಾನು ಮುಂದುವರೆಸುತ್ತೇನೆ ಎಂದಿದ್ದಾರೆ.
ಅಲ್ಲದೇ ಜನರಿಗಾಗಿ ಹೋರಾಟ ನಡೆಸುವುದಕ್ಕೆ ನಾನು ಅರೆಸ್ಟ್ ಆಗಬೇಕೆಂದು ಪೊಲೀಸರು ಹೇಳಿದರೆ.. ಅವರ ಕೆಲಸವನ್ನ ಅವರು ಮಾಡಲಿ, ನನ್ನ ಕೆಲಸವನ್ನ ನಾನು ಮಾಡುತ್ತೇನೆ ಎಂದು ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post