ಬೆಂಗಳೂರು: ವಿಧಾನಪರಿಷತ್ನಲ್ಲಿ ಸಂಪೂರ್ಣವಾಗಿ ಮೊಬೈಲ್ ಬ್ಯಾನ್ ಮಾಡಲು ನಿರ್ಧರಿಸಲಾಗಿದೆ. ಸದನದೊಳಗೆ ಪರಿಷತ್ ಸದಸ್ಯರು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಯಾರಿಗೂ ಮೊಬೈಲ್ ಬಳಕೆಗೆ ಅವಕಾಶ ಇಲ್ಲದಂತೆ ಕೆಲವೊಂದು ನಿಯಮ ರೂಪಿಸಲು ಸಭಾಪತಿ ಬಸವರಾಜ್ ಹೊರಟ್ಟಿ ಮುಂದಾಗಿದ್ದಾರೆ.
ಈ ಕುರಿತು ಇಂದು ವಿಧಾನಸೌಧದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಹೊರಟ್ಟಿ, ಮಾಧ್ಯಮಗಳನ್ನ ಯಾವುದೇ ಕಾರಣಕ್ಕೂ ದೂರ ಇಡುವ ಪ್ರಶ್ನೆಯೇ ಇಲ್ಲ. ಕೊರೊನಾ ಕಾರಣಕ್ಕೆ ಇನ್ನೂ ಮಾಧ್ಯಮಗಳಿಗೆ ಗ್ಯಾಲರಿಯಲ್ಲಿ ಅವಕಾಶ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಮಾಧ್ಯಮಗಳಿಗೆ ಅನುಕೂಲವಾಗುವಂತೆ ಮಾಡುತ್ತೇವೆ ಎಂದರು. ಬೇರೆ ಬೇರೆ ಕಡೆ ಮಾಧ್ಯಮಗಳನ್ನ ನಿಷೇಧ ಮಾಡಲಾಗಿದೆ, ನಮ್ಮಲ್ಲಿ ಬ್ಯಾನ್ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ರು.
ಪ್ರಕಾಶ್ ರಾಥೋಡ್ ಮೊಬೈಲ್ ವೀಕ್ಷಣೆ ವಿಚಾರವೇ ಇಡೀ ದಿನ ಸುದ್ದಿಯಾಗಿತ್ತು. ಊಟ ಮಾಡಿ ಸದನಕ್ಕೆ ಸದಸ್ಯರು ಬಂದಾಗ ಕೆಲ ನಿಮಿಷ ನಿದ್ದೆ ಮಾಡ್ತಾರೆ. ಮಾಧ್ಯಮಗಳಲ್ಲಿ ಅದೇ ಹೆಚ್ಚು ಸುದ್ದಿಯಾಗುತ್ತಿದೆ. ಇದರಿಂದ ಇಡೀ ಸದನದ ಗೌರವ ಮಣ್ಣಾಗುತ್ತೆ. ಯಾವುದೋ ಒಂದು ಸಣ್ಣ ಘಟನೆಯನ್ನೇ ದೊಡ್ಡದಾಗಿ ತೋರಿಸಲಾಗುತ್ತೆ ಎಂದು ಹೊರಟ್ಟಿ ಹೇಳಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post