ಬೆಂಗಳೂರು: ಸದ್ಯದ ಘಟನೆ ಕುರಿತಂತೆ ಇಬ್ಬರೂ ನಟರಿಂದ ನಮಗೆ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ. ಇಬ್ಬರೂ ದೊಡ್ಡ ನಟರೇ ಆಗಿದ್ದು, ಸಮಾಜದಲ್ಲಿ ನಾವು ಒಂದು ವಸ್ತು, ಊಟ ಆಗಿ ಸವಿಯುವುದು ಸರಿಯಲ್ಲ ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ನ್ಯೂಸ್ಫಸ್ಟ್ನೊಂದಿಗೆ ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಚಂದ್ರು ಅವರು, ಈ ಮಾತಿನ ಅರ್ಥ, ಮಾತನಾಡುವ ವೇಳೆ ಆಗಿರುವ ವ್ಯತ್ಯಾಸವನ್ನು ಇಬ್ಬರು ನಟರು ಬಗೆಹರಿಸಿಕೊಳ್ಳಬೇಕು. ನಾನು ಇಲ್ಲಿ ಯಾರನ್ನು ದೂರುತ್ತಿಲ್ಲ. ಅಭಿಮಾನಿಗಳು ತಮಗೆ ಇಷ್ಟ ಬಂದ ನಟರನ್ನು ಪ್ರೀತಿಸುತ್ತಾರೆ. ಆದರೆ ಎಲ್ಲೋ ಒಂದು ಕಡೆ ಆಗು ಹೋಗುಗಳನ್ನು ಗಮನಿಸಿದೆ. ಇಂತಹ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಇಂತಹ ಘಟನೆಗಳು ನಡೆಯುತ್ತದೆ.
ಅಭಿಮಾನಿಗಲು ಮೊದಲು ದರ್ಶನ್ ಅವರನ್ನು ಈ ಬಗ್ಗೆ ಕೇಳಬಹುದಿತ್ತು. ಅಥವಾ ಜಗ್ಗೇಶ್ ಅವರ ಬಳಿಯೇ ತಾಳ್ಮೆಯಿಂದಲೇ ಕೇಳಬಹುದಿತ್ತು. ಅವರು ಕೊಟ್ಟ ಸಮರ್ಥನೆಯನ್ನ ತೂಕ ಮಾಡಬೇಕಾಗಿತ್ತು. ಸದ್ಯ ಇಬ್ಬರು ನಟರು ಒಂದು ಸಲ ಮಾತನಾಡಿ ಅಭಿಮಾನಿಗಳಿಗೆ ಇಂತಹ ಘಟನೆಗಳು ಧ್ವೇಷಕ್ಕೆ ಕಾರಣವಾಗುತ್ತವೆ ಎಂದು ಹೇಳಬೇಕು.
ಈಗಲಾದರೂ ದರ್ಶನ್ ನಡುವೆ ಮಧ್ಯ ಪ್ರವೇಶ ಮಾಡಿ ಈ ವಿಚಾರಕ್ಕೆ ಇತ್ಯರ್ಥ ಹಾಡುವುದು ಒಳ್ಳೆಯದು. ಕೊರೊನಾ ಬಂದ ಮೇಲೆ ಸಿನಿಮಾ ರಂಗದಲ್ಲಿ ಸಿಕ್ಕಪಟ್ಟೆ ಸಮಸ್ಯೆಗಳಿವೆ. ನಿರ್ಮಾಪಕರು ಮಾತ್ರವಲ್ಲ, ಕಲಾವಿದರೂ, ವಿತರಕರು ಸೇರಿದಂತೆ ಎಲ್ಲರಿಗೂ ಸಮಸ್ಯೆಯಾಗಿದೆ. ಈಗ ದೊಡ್ಡ ದೊಡ್ಡ ನಟರು ಕುಳಿತುಕೊಂಡು ಮಾತನಾಡಿ ಪರಿಹಾರಗಳನ್ನು ಹುಡುಕಬೇಕಿದೆ. ಫಿಲ್ಮ್ ಚೇಂಬರ್ ಅವರು ಕೂಡ ಈ ಬಗ್ಗೆ ನಟರೊಂದಿಗೆ ಮಾತನಾಡಿ ಅಭಿಮಾನಿಗಳಿಗೆ ತಿಳಿ ಹೇಳುವ ಕಾರ್ಯ ಮಾಡಬೇಕಿದೆ. ಇಲ್ಲಿ ನಾನು ಎಂಬುದನ್ನು ಬಿಟ್ಟು, ಎಲ್ಲಿಂದ ಬಂದೇ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಿದೆ. ರಾಜ್ಕುಮಾರ್ ಅವರ ಹಾದಿಯಲ್ಲಿ ನಡೆಬೇಕಿದೆ ಎಂದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post