ಚೆನ್ನೈ: ಟೀಂ ಇಂಡಿಯಾ ವೇಗದ ಬೌಲರ್ ಟಿ ನಟರಾಜನ್ ಮೊದಲ ಬಾರಿಗೆ ತಮ್ಮ ಮಗಳ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದೇ ವೇಳೆ ಮಗಳ ಹೆಸರನ್ನು ರಿವೀಲ್ ಮಾಡಿರುವ ನಟರಾಜನ್, ‘ನಮ್ಮ ಪುಟ್ಟ ದೇವತೆ ಹನ್ವಿಕಾ’ ಎಂದು ಪತ್ನಿಯೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ನಮ್ಮ ಜೀವನದ ಸುಂದರ ಉಡುಗೊರೆ ನೀನು. ನಮ್ಮ ಜೀವನ ಇಷ್ಟು ಸಂತೋಷವಾಗಿದೆ ಎಂದರೇ ಅದಕ್ಕೆ ಕಾರಣ ನೀನು. ನಮ್ಮನ್ನು ಪೋಷಕರಾಗಿ ಆಯ್ಕೆ ಮಾಡಿಕೊಂಡಿದಕ್ಕೆ ಧನ್ಯವಾದ ಲಡ್ಡು ಎಂದು ನಟರಾಜನ್ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ಮಗಳ ಜನನದ ವೇಳೆ ನಟರಾಜನ್ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದರು. ಟಿ-20 ಸರಣಿಗೆ ಮಾತ್ರ ಆಯ್ಕೆಯಾಗಿದ್ದ ನಟರಾಜನ್, ತಂಡದ ಆಟಗಾರರ ಗಾಯದ ಸಮಸ್ಯೆಯಿಂದ ಏಕದಿನ ಮತ್ತು ಟೆಸ್ಟ್ ಎರಡು ಮಾದರಿಯಲ್ಲೂ ಪದಾರ್ಪಣೆ ಮಾಡಿದ್ದರು. ಐಪಿಎಲ್ನಲ್ಲಿ ಉತ್ತಮ ಪ್ರದರ್ಶಕನ ತೋರಿದ ಬಳಿಕ ನಟರಾಜನ್ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿದ್ದರು.
ಸದ್ಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯಗಳಿಗೆ ನಟರಾಜನ್ಗೆ ವಿಶ್ರಾಂತಿ ನೀಡಲಾಗಿದ್ದು, ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿದೆ. ಮಾರ್ಚ್ 12 ರಿಂದ ಟಿ-20 ಸರಣಿ ಆರಂಭವಾಗಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post