ಶಿರಸಿ: ರಾಜ್ಯದಲ್ಲೇ ಕನ್ನಡಾಂಬೆಯ ಏಕೈಕ ನಿತ್ಯಪೂಜೆ ನಡೆಯೋ ತಾಣ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿ ನಿನ್ನೆ ಭುವನೇಶ್ವರಿ ದೇವಿಯ ಮಹಾ ರಥೋತ್ಸವ ನೆರವೇರಿಸಲಾಯಿತು.
ಸಾಮಾನ್ಯವಾಗಿ ಪ್ರತಿ ವರ್ಷ ಭಾರತ ಹುಣ್ಣಿಮೆಯಂದು ಇಲ್ಲಿ ಕನ್ನಡಾಂಬೆ ಭುವನೇಶ್ವರಿಯ ರಥೋತ್ಸವ ನಡೆಯುತ್ತದೆ. ಅದೇ ರೀತಿ ಈ ವರ್ಷ ಕೂಡ ಕನ್ನಡಾಂಬೆಯ ಮಹಾರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಬೆಳಗ್ಗೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ಕೃಪೆಗೆ ಪಾತ್ರರಾದ್ರು. ನಂತರ ದೇವಿಯ ಮೂರ್ತಿಯನ್ನ ಮರದ ರಥದ ಮೇಲೆ ಕೂರಿಸಿ ಪೂಜೆ ಮಾಡಲಾಯಿತು. ಭಕ್ತರು ರಥಕ್ಕೆ ಕಾಯಿ ಒಡೆದು, ಬಾಳೆಹಣ್ಣು ಹಾಗೂ ಕಡಲೆ ಎಸೆಯೋ ಮುಖಾಂತರ ತಮ್ಮ ಹರಕೆಯನ್ನು ಭಕ್ತರು ತೀರಿಸಿಕೊಂಡರು. ರಥದಲ್ಲಿ ವಿರಾಜಮಾನಳಾಗಿರೋ ದೇವಿಯ ರಥವನ್ನು ಎಳೆಯೋ ಮುಖಾಂತರ ಮಹಾರಥೋತ್ಸವ ನೆರವೇರಿಸಲಾಯಿತು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post