ಅಸ್ಸಾಂ ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಬಿಜೆಪಿ ವಿರುದ್ಧ ವಿಡಿಯೋ ಕ್ಯಾಂಪೇನ್ ನಡೆಸುವ ಮೂಲಕ ಕಾಂಗ್ರೆಸ್ ಚುನಾವಣಾ ಪ್ರಚಾರ ನಡೆಸಿದೆ. ತನ್ನ ಕಾರ್ಯಕರ್ತರಿಗೆ ಬಿಜೆಪಿ ವಿರುದ್ಧ ಅಸ್ಸಾಂ ಬಚಾವೋ ಹೆಸರಿನಲ್ಲಿ 2 ನಿಮಿಷಗಳ ವಿಡಿಯೋ ತುಣುಕುಗಳನ್ನು ಹಂಚಿಕೊಳ್ಳಲು ಹೇಳಿತ್ತು. ಅಲ್ಲದೇ ಉತ್ತಮ ವಿಡಿಯೋ ಕಳುಹಿಸಿದವರಿಗೆ ಬಹುಮಾನವನ್ನೂ ಘೋಷಿಸಲಾಗಿತ್ತು.
ನಿನ್ನೆ ಅಸ್ಸಾಂ ಪ್ರದೇಶ್ ಕಾಂಗ್ರೆಸ್ ಕಮಿಟಿ ಉತ್ತಮ ವಿಡಿಯೋಗಳನ್ನ ಕಳುಹಿಸಿದ ಬಹುಮಾನಿತರಿಗೆ ಐಫೋನ್ಗಳು ಮತ್ತು ಹಣವನ್ನ ನೀಡಿದೆ.
ಅಸ್ಸಾಂನಲ್ಲಿ ಕಾಂಗ್ರೆಸ್ ಬಿಜೆಪಿ ವಿರುದ್ಧ ಸಮರ ಸಾರಿದ್ದು ಪಕ್ಷದ ನಾಯಕರು ಮಧ್ಯವರ್ತಿಗಳು, ಎನ್ಜಿಓಗಳು ಮತ್ತು ಸಾಮಾಜಿಕ ಗುಂಪುಗಳನ್ನ ಭೇಟಿಯಾಗಿ ತಮ್ಮ ಪ್ರಣಾಳಿಕೆಯ ಕುರಿತು ಚರ್ಚೆ ನಡೆಸಿದ್ದಾರೆ. ಒಟ್ಟು ಮೂರು ಹಂತಗಳಲ್ಲಿ ಅಸ್ಸಾಂನಲ್ಲಿ ಮತದಾನ ನಡೆಯಲಿದ್ದು ಮಾರ್ಚ್ 27 ರಿಂದ ಮತದಾನ ಪ್ರಾರಂಭವಾಗಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post