ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ ಯೋಗೇಶ್ವರ್, ಕುಮಾರಸ್ವಾಮಿಯವರನ್ನ ಸೋಲಿಸುತ್ತಾರೆ ಎಂದು ಡಿಸಿಎಂ ಡಾ.ಅಶ್ವಥ್ ನಾರಾಯಣ್ ಭವಿಷ್ಯ ನುಡಿದ್ದಿದ್ದಾರೆ.
ರಾಮನಗರದಲ್ಲಿ ಹೆಚ್‌ಡಿ ಕುಮಾರಸ್ವಾಮಿ ವರ್ಸಸ್ ಸಿ.ಪಿ.ಯೋಗೇಶ್ವರ್ ಸಂಘರ್ಷದ ವಿಚಾರವಾಗಿ ಮಾತನಾಡಿದ ಅಶ್ವಥ್ ನಾರಾಯಣ್, ಮುಂದಿನ ಚುನಾವಣೆಯಲ್ಲಿ ಯೋಗೇಶ್ವರ್ ಜೆಡಿಎಸ್ನ ಎದುರಾಳಿ. ಅವರು ಕುಮಾರಸ್ವಾಮಿಯನ್ನ ಸೋಲಿಸುತ್ತಾರೆ. ಕುಮಾರಸ್ವಾಮಿ ವಿರುದ್ಧ ಅವರು ನೀಡಿರುವ ಹೇಳಿಕೆಗಳು ಸ್ಪಷ್ಟವಾಗಿದೆ ಎಂದಿದ್ದಾರೆ.
ಇದೇ ವೇಳೆ ಕೇರಳದಲ್ಲಿ ವಿಧಾನಸಭಾ ಚುನಾವಣೆಯ ಬಗ್ಗೆ ಮಾತನಾಡಿ ಕೇರಳದಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ ಪಕ್ಷಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿವೆ. ನಮ್ಮ ಸಂಸ್ಕೃತಿಗೆ ವಿರುದ್ಧವಾಗಿ ರಾಜಕಾರಣ ಮಾಡುತ್ತಿವೆ. ಕಮ್ಯುನಿಸ್ಟರು ದೇಶದೆಲ್ಲೆಡೆ ಅಧಿಕಾರ ಕಳೆದುಕೊಳ್ತಿದ್ದಾರೆ. ಕೇರಳದಲ್ಲೂ ಕಮ್ಯುನಿಸ್ಟರು ನೆಲೆ ಕಳೆದುಕೊಳ್ಳೋದು ನಿಶ್ಚಿತ. ಎಲ್‌ಡಿಎಫ್, ಯುಡಿಎಫ್ ಪಕ್ಷಗಳಿಗೆ ಭವಿಷ್ಯ ಇಲ್ಲ, ಕೇರಳದಲ್ಲಿ ನಮ್ಮ ಪಕ್ಷದ ಪರ ಅಲೆ ಇದೆ. ನಮ್ಮ ಪಕ್ಷ ಕೇರಳದಲ್ಲಿ ಬೇರೂರುತ್ತದೆ. ಈ ಚುನಾವಣೆಯಲ್ಲಿ ನಮ್ಮ ಪಕ್ಷ ಉತ್ತಮ ಸಾಧನೆ ಮಾಡಲಿದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಗೆ ಲೈಫ್ ಕೊಟ್ಟಿದ್ದೇ ನಾನು ಎಂಬ ಹೆಚ್‌ಡಿಕೆ ಹೇಳಿಕೆ ಬಗ್ಗೆ ಮಾತನಾಡಿ.. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಅವರಿಗೂ ಅನುಕೂಲ ಆಯ್ತು. ಅವರಿಗೆ ನಾವು ಅಧಿಕಾರವನ್ನು ಬಂಗಾರದ ತಟ್ಟೆಯಲ್ಲಿ ಕೊಟ್ಟಿದ್ದೇವು. ಆದ್ರೆ ಬಂಗಾರದ ತಟ್ಟೆಯಲ್ಲಿ ಬಂದಿದ್ದನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಹಾಗಾಗಿ ಆ ಅಧಿಕಾರವನ್ನ ಕುಮಾರಸ್ವಾಮಿ ಕಾಲಲ್ಲಿ ಒದ್ದಿದ್ದರು. ಅದಕ್ಕೆ ನಾವೇನು ಮಾಡೋಕಾಗಲ್ಲ ಅಂತಾ ಟಾಂಗ್ ನೀಡಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post